ಬೆಂಗಳೂರು: ಸಿದ್ದರಾಮೋತ್ಸವಕ್ಕೆ ಬಿಜೆಪಿಗೆ ಹೊಟ್ಟೆ ಉರಿ ಎಂಬ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿರುವ, ನಳೀನ್ ಕುಮಾರ್ ಕಟೀಲ್, ನನಗೆ ಬಹಳ ಖುಷಿಯಾಗುತ್ತಿದೆ. ಸಿದ್ದರಾಮಣ್ಣ ನಾಲ್ಕೈದು ಲಕ್ಷ ಜನ ಸೇರಿಸಬೇಕು. ನಾವು ಅವರಿಗೆ ಸಹಕಾರ ನೀಡುತ್ತೇವೆ ಎಂದಿದ್ದಾರೆ.
ನಮಗೇನು ಅದರಿಂದ ಹೊಟ್ಟೆಕಿಚ್ಚು ಇಲ್ಲ. ಸಿದ್ದರಾಮೋತ್ಸವ ಮಾಡ್ತಿರೋದು ಬಿಜೆಪಿ ವಿರುದ್ದ ಅಲ್ಲ. ಅದು ಡಿ.ಕೆ.ಶಿವಕುಮಾರ್ ವಿರುದ್ಧ, ಪಕ್ಷದಲ್ಲಿ ತನ್ನ ಅಸ್ತಿತ್ವ ವನ್ನು ಉಳಿಸಿಕೊಳ್ಳೋಕೆ. ಹೈಕಮಾಂಡ್ ಗೆ ತನ್ನ ಶಕ್ತಿ ತೋರಿಸಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಅನ್ನೋದು. ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಡ ಹಾಕುವ ಪ್ರಯತ್ನವದು.
ಡಿ.ಕೆ.ಶಿವಕುಮಾರ್ ಮುಗಿಸುವ ಎರಡನೇ ಪ್ರಯತ್ನ ಇದು ಸಿದ್ದರಾಮಣ್ಣನ ತಂತ್ರಗಾರಿಕೆ. ಸಿದ್ದರಾಮಣ್ಣನವ್ರು ಮುಗಿಸಿಕೊಂಡೆ ಬಂದವ್ರು. ದೇವೇಗೌಡರನ್ನ ಮುಗಿಸಿದ್ರು,ಜನತಾ ದಳವನ್ನ ಮುಗಿಸಿದ್ರು. ಇಲ್ಲಿ ನಿಜವಾದ ಕಾಂಗ್ರೆಸ್ ನವ್ರನ್ನ ಹೊರಗಿಟ್ರು. ದಲಿತ ಸಿಎಂ ಅಭ್ಯರ್ಥಿ ಖರ್ಗೆ ಹೊರಹಾಕಿದ್ರು. ಮತ್ತೊಬ್ಬ ದಲಿತ ಪರಮೇಶ್ವರ್ ಸೋಲಿಸಿದ್ರು. ಈಗ ಡಿಕೆಶಿ ಮುಗಿಸುವ ತಂತ್ರಗಾರಿಕೆ ನಡಿತಿದೆ. ಇದರಿಂದ ನಮಗೆನೂ ಭಯ ಇಲ್ಲ. ಡಿ ಕೆ ಶಿವಕುಮಾರ್ ಗೆ ಭಯ ಅಷ್ಟೇ. ಡಿ.ಕೆ.ಶಿವಕುಮಾರ್ ನಿದ್ದೆಗೆಡಿಸುತ್ತದೆ. ಕಾಂಗ್ರೆಸಿಗರನ್ನ ನಿದ್ದೆಗೆಡಿಸುತ್ತದೆ. ನಾವು ಇನ್ನಷ್ಟು ಬೆಂಬಲ ಕೊಡ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.