ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಹೊರಟಿದೆ. ಆದರೆ ಎಷ್ಟೋ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಬಿಗ್ ಫೈಟ್ ನಡೆಯುತ್ತಿದೆ. ಅದರಲ್ಲಿ ಹಾಸನ ಕೂಡ ಒಂದು. ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡ ಹಾಗೂ ರೇವಣ್ಣ ಫ್ಯಾಮಿಲಿಯ ನಡುವೆ ಜಿದ್ದಾಜಿದ್ದಿನ ಮಾತುಕತೆಗಳು ಆಗಾಗ ಹೊರಗೆ ಬರುತ್ತಲೆ ಇರುತ್ತವೆ. ಹೀಗಿರುವಾಗ ಮೈತ್ರಿಯಲ್ಲಿ ಹಾಸನ ಕ್ಷೇತ್ರ ಯಾರ ಪಾಲಾಗಲಿದೆ ಎಂಬ ಪ್ರಶ್ನೆ ಎಲ್ಲರದ್ದು. ಇದೀಗ ಇಂದು ವಿಜಯೇಂದ್ರ ಅವರು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿ ಬಂದಿದ್ದಾರೆ.
ಈ ವೇಳೆ ಜೊತೆಯಲ್ಲಿಯೇ ಇದ್ದ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಯುವಕರಿಗೆ ಅವಕಾಶ ಕೊಡಬೇಕು ಎಂಬ ಕೂಗು ಇತ್ತು. ಈಗ ಬಿಜೆಪಿಯವರು ಕೊಟ್ಟಿರುವುದರಿಂದ ನಾವೂಗಳು ಕೈಜೋಡಿಸುವುದರಿಂದ ಒಳ್ಳೆಯದ್ದಾಗುತ್ತೆ. ದೇವೇಗೌಡರ ಸಲಹೆಗಳನ್ನು ತೆಗೆದುಕೊಂಡು ಮುಂದಿನ ದಿನಗಳಲ್ಲಿ ನಡೆತುತ್ತೇವೆ. ಕ್ಷೇತ್ರಗಳ ಬೇಡಿಕೆ ಬಗ್ಗೆ ಕುಮಾರಣ್ಣ ಅವರು ಚರ್ಚೆ ಮಾಡುತ್ತಾರೆ. ಬಲಾಬಲಗಳ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ನಾವೂ ಹೆಚ್ಚು ಅವರು ಹೆಚ್ಚು ಅಂತ ಅಲ್ಲ. ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಕಡೆಗೆ ಗಮನ ಕೊಟ್ಟಿದ್ದೇವೆ.
ಇದೆ ವೇಳೆ ಕಳೆದ ಬಾರಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಗೆದ್ದಿದ್ದು ಒಂದೇ ಕ್ಷೇತ್ರ. ಈ ಬಾರಿ ಆ ತಪ್ಪುಗಳ ಸರಿ ಮಾಡಿಕೊಳ್ಳುವಿಕೆ ಹೇಗೆ ಎಂಬುದರ ಬಗ್ಗೆ ಮಾತನಾಡಿ, ಆಗಲೇ ಒಮ್ಮೆ ಹೇಳಿದ್ದೆ, ಕಳೆದ ಬಾರಿ ಏನು ಮಾಡಿಕೊಂಡು ಇದ್ವಿ, ಬರೀ ದೊಡ್ಡವರು ಹೊಂದಾಣಿಕೆಯಲ್ಲ, ಎಲ್ಲರೂ ಹೊಂದಾಣಿಕೆಯಾಗಬೇಕು. ಆ ಬಗ್ಗೆ ಇವತ್ತು ದೇವೇಗೌಡ್ರು ಮಾತನಾಡಿದ್ದಾರೆ. ಅದೆಲ್ಲವನ್ನು ಚರ್ಚಿಸಿಯೇ ಮುಂದುವರೆಯುತ್ತೇವೆ. ಯಾರಾದ್ರೂ ಮಾಡಲಿ, ನಮ್ಮ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಲೋಕಸಭೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇವತ್ತಿನ ದಿನ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆಯಾಗಿದೆ ಎಂದಿದ್ದಾರೆ.