ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರು ನಿಧನರಾದ ಮೇಲೆ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿ ಉಳಿದಿದೆ. ಈ ಕ್ಷೇತ್ರದ ಉಪಚುನಾವಣೆಯೂ ನಡೆಯಲಿದೆ. ಬಹಳಷ್ಟು ವರ್ಷಗಳಿಂದಾನೂ ಈ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಪ್ರಭಾವವೇ ಹೆಚ್ಚಾಗಿದೆ. ಪ್ರತಿಬಾರಿ ಅಲ್ಲಿನ ಜನ ಶಾಮನೂರು ಶಿವಶಂಕರಪ್ಪ ಅವರನ್ನ ಗೆಲ್ಲಿಸ್ತಾ ಇದ್ದರು. ಮಗ ಮಲ್ಲಿಕಾರ್ಜುನ್ ಸಚಿವರಾಗಿದ್ದಾರೆ, ಸೊಸೆ ಪ್ರಭಾ ಮಲ್ಲಿಕಾರ್ಜುನ್ ಸಂಸದೆಯಾಗಿದ್ದಾರೆ. ಇದರ ನಡುವೆ ಮಲ್ಲಿಕಾರ್ಜುನ್ ಅವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕೋಸ್ಕರ ಹೋರಾಟ ಶುರು ಮಾಡಿದ್ದಾರೆ. ಜೊತೆಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ಎಂಬ ಚರ್ಚೆಯೂ ಜೋರಾಗಿ ನಡೀತಾ ಇದೆ. ಅಲ್ಲಿನ ಕ್ಷೇತ್ರದ ಟಿಕೆಟ್ ಬಗ್ಗೆ ಎಂಎಲ್ಎ ಬಸವರಾಜ್ ಶಿವಗಂಗಾ ಮಾತನ್ನಾಡಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಸುಮಾರು ಸಲ ಮಾತಾಡಿದ್ದೀನಿ ದಾವಣಗೆರೆ ದಕ್ಷಿಣ ಕ್ಷೇತ್ರದ್ದು. ಅಲ್ಪಸಂಖ್ಯಾತರಿಗೆ ಒಂದು ಅವಕಾಶ ಮಾಡಿಕೊಡಿ ಅಂತ. ಯಾಕಂದ್ರೆ ಇಡೀ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಬರೀ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ನಿಂತಿದ್ದಾರೆ. ಶಿಗ್ಗಾಂವಿಯಲ್ಲಿ ಸಹ ಮೈನಾರಿಟಿಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದೀವಿ. ಅದೇ ರೀತಿ ಇಲ್ಲೂ ಸಹ ಗೆಲ್ಲಿಸಿಕೊಂಡು ಬರ್ತೀವಿ. ಅವರಿಗೊಂದು ಅವಕಾಶ ಕೊಡಲಿ ಅನ್ನೋದು ನನ್ನದೊಂದು ಮನವಿ.
ಅಲ್ಪಸಂಖ್ಯಾತರು ಬೇಡ, ಇನ್ನೊಬ್ಬರು ಬೇಡ, ಹೊಸ ಮುಖಗಳು ಬೇಕು ಅಂತ ಅವರು ಅಂದುಕೊಂಡರೆ ನಮ್ಮ ಬ್ರದರ್ ಗೆ ಕೊಡಲಿ ಅಂತ ಹೇಳಿದ್ದೀನಿ. ಹೊರಗೊಂದು, ಒಳಗೊಂದು ಮಾತನ್ನಾಡುವುದಕ್ಕೆ ನಂಗೆ ಬರೋದಿಲ್ಲ. ಹೈಕಮಾಂಡ್ ಯಾರಿಗೆ ಕೊಟ್ಟರು ಓಕೆ. ನಮಗೆ ಕೊಟ್ಟರು ಓಕೆ. ಆದರೆ ಅಲ್ಪಸಂಖ್ಯಾತರಿಗೆ ಮೊದಲು ಆದ್ಯತೆ ಕೊಡಿ ಅಂತ ಕೇಳಿದ್ದಾರೆ.



