ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಾಂಗ್ರೆಸ್ ಸರ್ಕಾರ ಒದಗಿಸಿಕೊಟ್ಟಿದೆ. ಉಚಿತ ಬಸ್ ಸೇವೆ ಒದಗಿಸಿದ ಬಳಿಕ ಓಡಾಟದ ಜನಸಂಖ್ಯೆಯೂ ಜಾಸ್ತಿಯಾಗಿದೆ. ಜೊತೆಗೆ ನೂಕು ನುಗ್ಗಲಿನಿಂದಾಗಿ ಬಸ್ ಗಳಿಗೂ ಹಾನಿಯಾಗಿದೆ. ಗದಗ ಜಿಲ್ಲೆಯಲ್ಲಿ ಬಸ್ ಬಾಗಿಲು ಕಿತ್ತುಕೊಂಡು ಬಂದ ಘಟನೆ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.
ಗುಜರಿಗೆ ಹೋಗಬೇಕಾದ ಬಸ್ ಗಳನ್ನು ಪ್ರಯಾಣಕ್ಕೆ ಬಳಸಲ್ಲ. ಆದಷ್ಟು ಬೇಗ ಬಸ್ ಗಳನ್ನು ಬದಲಾಯಿಸಲಾಗುತ್ತದೆ. ಸಾರಿಗೆ ಬಸ್ ಗಳ ಕಂಡೀಷನ್ ಸರಿ ಇಲ್ಲ. ಅದನ್ನೆಲ್ಲಾ ಬಿಜೆಪಿಯೇ ಸರಿ ಮಾಡಬೇಕಿತ್ತು. ಹದಗೆಟ್ಟ ಬಸ್ ಗಳನ್ನು ಪರಿಶೀಲನೆ ಮಾಡಲಾಗುತ್ತದೆ.
ಕಾಲ ಕಾಲಕ್ಕೆ ಸರಿಯಾಗಿ ಸಾರಿಗೆ ಇಲಾಖೆಯಲ್ಲಿ ಹೊಸ ಬಸ್ ಗಳನ್ನು ಬಿಡಬೇಕು. ಈ ಮೊದಲು ಬಿಜೆಪಿಯವರು ಈ ಕೆಲಸ ಮಾಡಬೇಕಿತ್ತು. ಆದರೆ ಅವರು ಮಾಡಿಲ್ಲ. ನಾಲ್ಕು ಸಾವಿರ ಹೊಸ ಬಸ್ ಗಳನ್ನು ಹೊಸದಾಗಿ ಬಿಡಲಾಗುವುದು. ಮೆಕ್ಯಾನಿಕಲ್ ಕೊರತೆಯಿಂದ ಬಸ್ ಗಳ ಪರಿಸ್ಥಿತಿ ಬದಲಾಯಿಸಲು ಆಗಿಲ್ಲ. ಇದೀಗ ಹೊಸ ನೇಮಕಾತಿ ಮಾಡುತ್ತೇವೆ. ಗದಗ ಜಿಲ್ಲೆಯ ಬಸ್ ಗಳ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ ಎಂದಿದ್ದಾರೆ.