ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದಿಲ್ಲ. ಹೀಗಾಗಿ ರೈತರು ಆತಂಕದಲ್ಲಿ ಇದ್ದರು. ಮಳೆ ಬರದಿದ್ದರೆ ಈ ಬಾರಿಯ ಬೆಳೆಯ ಕಥೆ ಏನು ಎಂದು ಆತಂಕದಲ್ಲಿದ್ದರು. ಇದೀಗ ಮಳೆ ಎಲ್ಲಾ ಕಡೆ ಒಂದು ಹಂತಕ್ಕೆ ಆಗಮನವಾಗಿದೆ.
ಮಳೆ ಇಲ್ಲದ ಹಿನ್ನೆಲೆ ಮೋಡ ಬಿತ್ತನೆ ಮಾಡಲಾಗುತ್ತದೆಯಾ ಎಂಬ ಪ್ರಶ್ನೆಯೂ ಎಲ್ಲರಲ್ಲೂ ಕಾಡಿತ್ತು. ಇದೀಗ ಆ ಸಂಬಂಧ ಸಚುವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮೋಡ ಬಿತ್ತನೆ ಬಗ್ಗೆ ರಾಜ್ಯ ಸರ್ಕಾರ ಅಂತಿಮ ಹೆಜ್ಜೆ ಇಡಲಿದೆ. ಕ್ಯಾಬಿನೆಟ್ ಸಬ್ ಕಮಿಟಿ ಈಗಾಗಲೇ ಒಂದು ಸಭೆ ಮಾಡಿದೆ.
ಮಳೆ ಬರದಿದ್ರೆ ಬರಗಾಲ ಎಂದು ಘೋಷಣೆ ಮಾಡಲಾಗುವುದು. ಬರಗಾಲ ಎಂದು ಘೋಷಣೆ ಮಾಡುವುದಕ್ಕೆ ಕೆಲವು ಮಾನದಂಡಗಳು ಇದೆ. ಅದನ್ನೆಲ್ಲಾ ಅನುಸರಿಸಿ ನಂತರ ಬರಗಾಲ ಎಂದು ಘೋಷಣೆ ಮಾಡಲಾಗುತ್ತದೆ. ಈ ತಿಂಗಳು ಒಳಗೆ ಉತ್ತಮ ಮಳೆ ಯಾಗುವ ಬಗ್ಗೆ ವರದಿ ಇದೆ. ಮಳೆಗಾಗಿ ಚಿಕ್ಕಮಗಳೂರಿನಲ್ಲಿ ಪೂಜೆ ಮಾಡಿ ಬಂದಿದ್ದೇವೆ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.