ಅಣ್ಣಾವ್ರ ಕುಟುಂಬಕ್ಕೆ ‘ಹೃದಯ ಸಂಬಂಧಿ ಕಂಟಕ’ : ಮೆಗಾ ಸ್ಟಾರ್ ಹೇಳಿದ್ದೇನು..?

1 Min Read

ಬೆಂಗಳೂರು : ಫಿಟ್ ಆಂಡ್ ಫೈನ್ ಹೆಸರಿಗೆ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಪಕ್ಕ ಉದಾಹರಣೆಯಾಗಿದ್ದವರು.‌ ಆಹಾರ ಕ್ರಮ, ಡಯೆಟ್, ಫಿಟ್ನೆಸ್ ಕಡೆ ಹೆಚ್ಚು ಗಮನ ಕೊಡ್ತಿದ್ದವರು.‌ ಆದ್ರೆ ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ನಿಂದಾಗಿ ಎಲ್ಲರನ್ನು ಬಿಟ್ಟು ದೂರದೂರಿಗೆ ಪ್ರಯಾಣ ಮಾಡಿ ಬಿಟ್ಟರು. ಅವರಿಗೆ ಹಾರ್ಟ್ ಅಟ್ಯಾಕ್ ಅನ್ನೋ ಸುದ್ದಿ ಇನ್ನು ಯಾರಲ್ಲೂ ಜೀರ್ಣಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಆದ್ರೆ ಅದು ಸತ್ಯವೇ. ಈ ಬಗ್ಗೆ ಮೆಗಾ ಸ್ಟಾರ್ ಚಿರಂಜೀವಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಣ್ಣಾವ್ರ ಕುಟುಂಬಕ್ಕೆ ಮೆಗಾಸ್ಟಾರ್ ತುಂಬಾ ಆತ್ಮೀಯರಾಗಿದ್ದವರು. ಅಪ್ಪು ನಿಧನದ ಸುದ್ದಿ ಅವರಿಗೆ ಆಘಾತವಾಗಿತ್ತು. ಆ ನೋವಲ್ಲೇ ಅಪ್ಪು ಅಂತಿಮ ದರ್ಶನವನ್ನು ಪಡೆದಿದ್ದರು. ಈಗ ಕಾರ್ಯಕ್ರಮವೊಂದರಲ್ಲಿ ಅಣ್ಣಾವ್ರ ಕುಟುಂಬಕ್ಕೆ ಕಾಡ್ತಿರುವ ಆ ಕಂಟಕದ ಬಗ್ಗೆ ಮಾತಾಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಇಂದಿನ ಯುವಪೀಳಿಗೆ ಆರೋಗ್ಯದ ಬಗ್ಗೆ ಬೇಜಾವಾಬ್ದಾರಿತನ ತೋರುತ್ತಿದೆ. ಆದ್ರೆ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿವಹಿಸಿ ಎಂದು ಮನವಿ ಮಾಡಿದ್ದಾರೆ. ಅಣ್ಣಾವ್ರು ಹೃದಯ ಸಂಬಂಧಿ ಕಾಯಿಲೆಯಿಂದಲೇ ನಮ್ಮನ್ನು ಅಗಲಿದರು. ರಾಜ್ ಕುಡಿ ಶಿವರಾಜ್ ಕುಮಾರ್ ಅವರಿಗೂ ಹೃದಯ ಸಂಬಂಧಿ ಕಾಯಿಲೆ ಇತ್ತು ಈಗ ಗುಣಮುಖರಾಗಿದ್ದಾರೆ. ಇನ್ನು ಎರಡನೇ ಪುತ್ರ ರಾಘವೇಂದ್ರ ರಾಜ್‍ಕುಮಾರ್ ಹಾರ್ಟ್ ಪ್ರಾಬ್ಲಮ್ ನಲ್ಲೇ ಬಳಲುತ್ತಿದ್ದಾರೆ. ಈಗ ಅಪ್ಪು ಹಾರ್ಟ್ ಸಮಸ್ಯೆಯಿಂದಾನೇ ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ಫಿಟ್ ಆಂಡ್ ಫೈನ್ ಆಗಿದ್ದ ಅಪ್ಪುಗೆ ಯಾವುದೇ ಚಟಗಳಿರಲಿಲ್ಲ. ಆದ್ರೂ ಹಾರ್ಟ್ ಅಟ್ಯಾಕ್ ಆಗಿದ್ದು ಶಾಕಿಂಗ್ ಎಂದು ಚಿರಂಜೀವಿ ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *