ಬೆಂಗಳೂರು: ಹಲವು ದಿನಗಳಿಂದ ಬಿಜೆಪಿ ಮತ್ತು ಜೆಡಿಎಸ್ ನಲ್ಲಿರುವವರು ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಿಂದ ಹೋದವರು ಕೂಡ ಕಾಂಗ್ರೆಸ್ ಅನ್ನೇ ಸೇರುತ್ತಾರೆ ಎಂಬ ಮಾತಿದೆ. ಈ ಮಧ್ಯೆ ಜೆಡಿಎಸ್ ಬಿಟ್ಟು ಕುಮಾರ ಬಂಗಾರಪ್ಪ ಕಾಂಗ್ರೆಸ್ ಗೆ ಬರಲಿದ್ದಾರಾ ಎಂಬ ಚರ್ಚೆಯ ನಡುವೆ ಮಧು ಬಂಗಾರಪ್ಪ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.
ಇಡೀ ರಾಜ್ಯದಲ್ಲಿ ಯಾರೇ ಕಾಂಗ್ರೆಸ್ ಗೆ ಬಂದರೂ ನನಗಂತೂ ಯಾವ ಅಭ್ಯಂತರವೂ ಇಲ್ಲ. ಸಿಎಂ ಮತ್ತು ಡಿಸಿಎಂ ನಿರ್ಧಾರ ಮಾಡ್ತಾರೆ ಯಾರೂ ಬರಬೇಕು ಎಂಬುದನ್ನು. ನಾನೊಬ್ಬ ಓಬಿಸಿ ಘಟಕದ ಅಧ್ಯಕ್ಷನಾಗಿ ಹೇಳ್ತೇನೆ. ಇಡೀ ರಾಜ್ಯದಲ್ಲಿ ಪಕ್ಷ ಬೆಳೆಯಬೇಕು. ಸೊರಬ ಸೇರಿದಂತೆ ರಾಜ್ಯದ ಯಾವ ಮೂಲೆಯಿಂದ ಪಕ್ಷಕ್ಕೆ ಬಂದರೂ ಅಭ್ಯಂತರವಿಲ್ಲ.
ನಿರ್ಧಾರದ ಕೀಲಿ ಕೈ ನನ್ನ ಬಳಿ ಇಲ್ಲ. ಅಧ್ಯಕ್ಷರ ಕೈನಲ್ಲಿ ಕೀಲಿಇದೆ. ಅವರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಬರುವವರೆಲ್ಲಾ ಬರಲಿ. ಹಬ್ಬ ಮಾಡೋಣಾ. ಕೆಲಸ ಮಾಡೋಣಾ. ರಾಜ್ಯಕ್ಕೆ ಸೇವೆ ಸಲ್ಲಿಸೋಣಾ. ಎಲ್ಲವೂ ಚೆನ್ನಾಗಿ ಆಗಲಿ ಎಂದು ಹಾರೈಸಿದ್ದಾರೆ.
ಸದ್ಯ ಲೋಕಸಭಾ ಚುನಾವಣೆಯೇ ಕಾಂಗ್ರೆಸ್ ನ ಟಾರ್ಗೆಟ್ ಆಗಿದೆ. ಈಗಾಗಲೇ ಸಾಕಷ್ಟು ತಯಾರಿಯನ್ನು ನಡೆಸಿರುವ ಕಾಂಗ್ರೆಸ್ ಜೊತೆಗೆ ವಿಪಕ್ಷಗಳ ಒಟ್ಟಾಗಿವೆ. ಈ ಬಾರಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳಿಗೂ ಬಿಜೆಪಿಯೇ ಟಾರ್ಗೆಟ್ ಆಗಿದೆ.