Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೃಷಿ ಖಾತೆ ನಿರೀಕ್ಷೆಯಲ್ಲಿದ್ದ ಕುಮಾರಸ್ವಾಮಿ ಬೇರೆ ಖಾತೆ ಬಗ್ಗೆ ಹೇಳಿದ್ದೇನು..?

Facebook
Twitter
Telegram
WhatsApp

 

ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪಕ್ಷ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಮೋದಿ ಸಂಪುಟದಲ್ಲಿ ಕುಮಾರಸ್ವಾಮಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ಅವರು ಕೃಷಿ ಖಾತೆಯ ನಿರೀಕ್ಷೆಯಲ್ಲಿದ್ದರು. ಆದರೆ ಕೇಂದ್ರ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಖಾತೆಯನ್ನು ನೀಡಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಖಾತೆ ಹಂಚಿಕೆ ಮಾಡಿದ್ದು, ಕೃಷಿ ಖಾತೆಯ ನಿರೀಕ್ಷೆ ಇತ್ತು. ಆದರೆ ಮೋದಿ ತೀರ್ಮಾನ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾಗಿ ಯೋಚನೆ ಮಾಡಿ ಖಾತೆ ನೀಡಿದ್ದಾರೆ. ಕನ್ನಡಿಗರ ಪರವಾಗಿ ಪ್ರಧಾನಿ ಮೋದೊ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ದೇಶದ ಪ್ರಗತಿಗೆ ಕೆಲಸ ಮಾಡಬೇಕಿದೆ. ಎಲ್ಲವನ್ನು ಗಮನಿಸಿ ಇಲಾಖೆಯನ್ನು ಮೋದಿ ಕೊಟ್ಟಿದ್ದಾರೆ. ಪ್ರಾಮಾಣಿಕವಾಗಿ ಸಮಯ ವ್ಯರ್ಥ ಮಾಡದೆ‌ ಕೆಲಸ‌ ಮಾಡುತ್ತೇನೆ. ರೂಟ್ ಮ್ಯಾಪ್ ಸಿದ್ದ ಮಾಡಿ ಕೆಲಸ‌ ಮಾಡುತ್ತೇನೆ.

 

ಕರ್ನಾಟಕದಲ್ಲಿ ಹಲವಾರು ಸಮಸ್ಯೆಗಳಿವೆ. ಇದು ನನ್ನ ಜೀವನದಲ್ಲಿ ಅತಿ ದೊಡ್ಡ ಸವಾಲು ಇದು. ಅವುಗಳನ್ನು ಈಗ ಚರ್ಚೆ ಮಾಡುವುದಿಲ್ಲ. ನನ್ನದೆ ಕಲ್ಪನೆಯಲ್ಲಿ ಕೆಲಸ‌ಮಾಡಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ನನ್ನ ವಿಚಾರದಲ್ಲಿ ವಿಶೇಷವಾದ ನಂಬಿಕೆ ಇಟ್ಟು ಖಾತೆ ನೀಡಿದ್ದಾರೆ. ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಕೆಲಸ ಮಾಡಬೇಕಿದೆ. ಕರ್ನಾಟಕ ಮಾತ್ರ ಅಂತ ಹೇಳುವುದಿಲ್ಲ. ದೇಶದಾದ್ಯಂತ ಸುತ್ತಾಡಿ‌ ಕೆಲಸ ಮಾಡುತ್ತೇನೆ. ಬದಲಾವಣೆಯನ್ನು ತರುವುದಕ್ಕೆ ಬಯಸುತ್ತೇನೆ. ಇನ್ನು ಶೋಭಾ ಕರಂದ್ಲಾಜೆ ಹಾಗೂ ಪ್ರಹ್ಲಾದ್ ಜೋಶಿ ಅವರಿಗೂ ಒಳ್ಳೆ ಖಾತೆ ನೀಡಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತರುಣ್ ಸುಧೀರ್ & ಸೋನಲ್ ಮದುವೆ ಆಗ್ತಾ ಇರೋದು ಸತ್ಯ : ಮಾಲತಿ ಸುಧೀರ್ ಸ್ಪಷ್ಟನೆ

ಕಳೆದ ಕೆಲವು ದಿನಗಳಿಂದ ಗಾಂಧಿನಗರದ ಮೂಲೆ‌ ಮೂಲೆಯಲ್ಲೂ ತರುಣ್ ಸುಧೀರ್ ಅವರ ಮದುವೆಯದ್ದು ಸದ್ದು. ತರುಣ್ ಹಾಗೂ ನಟಿ ಸೋನಲ್ ಮದುವೆಯಾಗ್ತಾ ಇದ್ದಾರಂತೆ ಎಂಬ ಗುಸುಗುಸು. ಮಹಾನಟಿ ವೇದಿಕೆಯಲ್ಲೂ ಈ ಟಾಪಿಕ್ ಬಂದಾಗ ತರುಣ್

ಸಿಎಂ ಪತ್ನಿ ಹೆಸರಿಗೆ 14 ಮೂಡಾ ಸೈಟ್ ಗಳು : ಸಿದ್ದರಾಮಯ್ಯ ಹೇಳಿದ್ದೇನು..?

  ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಮೂಡಾ ಸೈಟುಗಳನ್ನು ಮಾಡಲಾಗಿದೆ ಎಂಬುದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಐ ಕಾರ್ಯಕರ್ತ ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದಿದ್ದಾರೆ. ಜೊತೆಗೆ ಸಿಎಂ

ಉತ್ತರಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ : ಕಾಲ್ತುಳಿತಕ್ಕೆ 80 ಕ್ಕೂ ಹೆಚ್ಚು ಮಂದಿ ಸಾವು…!

ಸುದ್ದಿಒನ್, ಜುಲೈ. 02 : ನವದೆಹಲಿ: ಮಂಗಳವಾರ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 87 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೋಲೆ ಬಾಬಾರವರ ಸತ್ಸಂಗ

error: Content is protected !!