ತುಮಕೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಫುಲ್ ಆಕ್ಟೀವ್ ಆಗಿದೆ. ತನ್ನ ಪಂಚರತ್ನ ಯಾತ್ರೆಯ ಮೂಲಕ ಜಿಲ್ಲೆ ಜಿಲ್ಲೆಯಲ್ಲೂ ಸಂಚಾರ ನಡೆಸುತ್ತಿದೆ. ಇಂದು ಪಂಚರತ್ನ ಯಾತ್ರೆ ತುಮಕೂರು ಜಿಲ್ಲೆಗೆ ಸಾಗಿದ್ದು, ಜನರಿಗೆ ಹೊಸ ಭರವಸೆಯ ಜೊತೆಗೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಿಗೂ ಗುಡ್ ನ್ಯೂಸ್ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿಯ ದಂಡಿನ ಮಾರಮ್ಮ ದೇಗುಲದ ಬಳಿ ಮಾಜಿ ಸಿಎಂ ಕುಮಾರಸ್ವಾಮಿ, ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಮಧುಗಿರಿ ತಾಲೂಕು ಅತ್ಯಂತ ಹಿಂದುಳಿದಿದೆ. ಉಪ ಚುನಾವಣೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ನಿರೀಕ್ಷೆಗೆ ತಕ್ಕಂತೆ ನಾವೂ ಕೆಲಸ ಮಾಡಲು ಆಗಿಲ್ಲ. ಹೀಗಾಗಿ ಆ ಬಗ್ಗೆ ಕ್ಷಮೆ ಕೇಳುತ್ತೇನೆ. ಸದ್ಯ ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಅದಕ್ಕಾಗಿ ಕೈಗಾರಿಕೆಗಳನ್ನು ನಿರ್ಮಿಸುವಂತೆ ಶಾಸಕ ಎಂ ವೀರಭದ್ರಯ್ಯನವರಿಗೆ ಮನವಿ ಮಾಡಿದ್ದೇನೆ. ನನ್ನ ಸರ್ಕಾರ ಕೇವಲ 11 ತಿಂಗಳಷ್ಟೆ ಕೆಲಸ ಮಾಡಿದೆ.
ಅಂದು ನಾನು ತಾಲೂಕಿಗೆ ಕೊಟ್ಟ ಅನುದಾನ ಈಗಲೂ ಬಿಡುಗಡೆಯಾಗುತ್ತಿದೆ. ದೇವೇಗೌಡರವರ ಮೇಲೆ ನೀವೂ ಇಟ್ಟ ಅಭಿಮಾನ ಎಂದಿಗೂ ಮರೆಯಲಾರೆವು. ಈಗಾಗಲೇ ಜೆಡಿಎಸ್ ನಿಂದ ಟಿಕೆಟ್ ನೀಡಲಾದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅದೇ ಫೈನಲ್ ಅಲ್ಲ ಎನ್ನುವ ಮೂಲಕ ಆಕಾಂಕ್ಷಿಗಳಿಗೆ ನಮ್ಮ ಹೆಸರು ಬರಬಹುದೇನೋ ಎಂಬ ಸಂತಸ ಹೆಚ್ಚಿಸಿದ್ದಾರೆ.