ಸಿಎಂ ಸಿದ್ದರಾಮಯ್ಯ ಅವರ ಜನತಾ ದರ್ಶನದ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು..?

suddionenews
1 Min Read

ಕೊಡಗು: ಸಿಎಂ ಸಿದ್ದರಾಮಯ್ಯ ನಿನ್ನೆ ಇಡೀ ದಿನ ಜನತಾ ದರ್ಶನ ಕಾರ್ಯಕ್ರಮ ನಡೆಸಿದರು. ರಾಜ್ಯದ ಊರು ಊರುಗಳಿಂದ ಬಂದಿದ್ದಂತ ಜನರ ಸಮಸ್ಯೆಗಳನ್ನು ಸ್ವತಃ ತಾಳ್ಮೆಯಿಂದ ಕೇಳಿದರು. ಈ ಜನತಾ ದರ್ಶನದ ಬಗ್ಗೆ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಜನತಾ ದರ್ಶನದ ಮೂಲಕ ರಾಜ್ಯದ ಆಡಳಿತ ಹೇಗೆ ನಡೆಯುತ್ತಿದೆ ಎಂಬುದರ ವಾಸ್ತವ ಚಿತ್ರಣ ಈಗ ಸಿಎಂ ಅವರಿಗೆ ಅರಿವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಕಾರ್ಯಕ್ರಮವನ್ನು ಜನತಾ ದರ್ಶನ ಅಲ್ಲ, ಜನತಾ ಸ್ಪಂದನಾ ಎಂದು ತಿಳಿಸಿದ್ದಾರೆ. ಇದಕ್ಕೆ ಅದಕ್ಕೆ‌ ನನಗೆ ತಕರಾರಿಲ್ಲ. ಅಭಿನಂದಿಸುತ್ತೇನೆ. ಎಲ್ಲದಕ್ಕೂ ಸರ್ಕಾರವನ್ನು ಟೀಕೆ ಮಾಡುವುದಕ್ಕೆ ಹೋಗುವುದಿಲ್ಲ ಎಂದಿದ್ದಾರೆ.

 

ಒಬ್ಬ ಮುಖ್ಯಮಂತ್ರಿ ಜನತಾ ಸ್ಪಂದನಾ ನಡೆಸಿದ್ದನ್ನು ನಾನು ಮೆಚ್ಚುತ್ತೇನೆ. ಮುಂದಿನ ಮೂರು ತಿಂಗಳಲ್ಲಿ ಮತ್ತೆ ಜನತಾ ಸ್ಪಂದನಾ ಮಾಡುವುದಾಗಿ ಹೇಳಿದ್ದಾರೆ. ಅಧಿಕಾರಿಗಳಿಗೂ ಸರಿಯಾಗಿ ಕೆಲಸ ಮಾಡುವಂತೆ ಗಡುವು ನೀಡಿದ್ದಾರೆ. 2006ರಲ್ಲಿ ನಾನು ಕೂಡ ಮಧ್ಯರಾತ್ಯಿಯ ತನಕ ಜನತಾ ದರ್ಶನ ನಡೆಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಜನತಾ ದರ್ಶನ ನಡೆಸಿ, ಜನರ ಕಷ್ಟಗಳನ್ನು ಆಲಿಸಿದ್ದಾರೆ‌.

 

ಪಕ್ಷದ ಕಾರ್ಯಕರ್ತರ ಸಭೆ ನಡೆಸಲು ಮಡಿಕೇರಿಗೆ ಬಂದಿದ್ದೇನೆ. ನಮ್ಮ ಶಕ್ತಿ ಕಡಿಮೆ ಇರುವುದರಿಂದ ಇಲ್ಲಿ ಕಾಂಗ್ರೆಸ್ ಗೆದ್ದಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆ ಪಕ್ಷ ಸಂಘಟಬೆ ಆಗಬೇಕಿದೆ. ರಾಜ್ಯದಲ್ಲಿ ಮತ್ತೆ ಮೈತ್ರಿ ಸರ್ಕಾರ ಬರಬೇಕೆಂದು ಜನ ಅಭಿಪ್ರಾಯ ಪಟ್ಟಿದ್ದಾರೆ. ಈಗಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಬೇಸರವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *