ಹಾಸನ : ಮದ್ಯದ ಬಗ್ಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಾಮಿಡಿ ಮಾಡಿದ್ದಾರೆ. ಕುಡಿಬೇಕು ಅಂಥಾ ಯಾರೂ ಕುಡಿಯಲ್ಲ. ಕೆಲವು ಟೈಂ ಜೀವನದಲ್ಲಿ ನೋವು ಬರುತ್ತೆ. ಆಗ ಕುಡಿತಾರೆ ಅಂತ ನಗೆ ಚಟಾಕಿ ಹಾರಿಸಿದ್ದಾರೆ.
ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವಾರ್ಷಿಕ ಸಭೆಯಲ್ಲಿ ರೇವಣ್ಣ ಭಾಗಿಯಾಗಿದ್ದರು. ಈ ವೇಳೆ ಮದ್ಯದ ಬಗ್ಗೆ ಮಾತನಾಡಿದ್ದಾರೆ. ಕೆಲವೊಮ್ಮೆ ಜೀವನದಲ್ಲಿ ಬರುವ ಆ ನೋವು ತಡೆಯುವುದಕೋಸ್ಕರನಾದ್ರು ಒಂದು ಕ್ವಾಟರ್ ಹಾಕ್ಲೆಬೇಕಾಗುತ್ತೆ.
ಬಡ್ಡಿಗೆ ಸಾಲ ಮಾಡಿರ್ತಾರೆ. ತೀರಿಸಲು ಆಗದೆ ಇದ್ದಾಗ ಅವರು ಮನೆಹತ್ರ ಬಂದು ಕುಳಿತ್ಕೋತಾರೆ. ಅವರಿಗೆ ದುಡ್ಡು ಕೊಡೋದಕ್ಕೆ ಆಗಲ್ಲ. ಆಗ ಕ್ವಾಟ್ರು ಕುಡಿದು ಮಲ್ಕೋಬೇಕೋ ಅಥವಾ ವಿಷ ತೆಗೆದುಕೊಳ್ಳಬೇಕು. ಆ ಪರಿಸ್ಥಿತಿಯಲ್ಲಿ ಕುಡಿತಾರೆ.
ಹಾಸನದ ಡೈರಿ ಸರ್ಕಲ್ ನಿಂದ ಬೇಲೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೋಗಿ. ಅಲ್ಲಿ ನಲವತ್ತು ಬಾರ್ ಸಿಗುತ್ತೆ, ಇದು ಈ ಸರ್ಕಾರದ ಒಂದು ಸಾಧನೆ. ಪಾಪ ಹೆಣ್ಮಕ್ಳು ಬಂದು ಅಳ್ತವೆ. ಕುಮಾರಸ್ವಾಮಿ ಇದ್ದಾಗ ಹೆಣ್ಮಕ್ಳು ಏನ್ ಮಾಡಿದ್ರು. ಅಣ್ಣಾ ಶರಾಬು ನಿಲ್ಸಿ ಅಂದ್ರು, ಕುಮಾರಸ್ವಾಮಿ ಏನ್ ಮಾಡ್ದಾ ಶರಾಬು ನಿಲ್ಸಿಬಿಟ್ಟ. ಈಗ ಜನ ಏನಂತರೆ, ಅಣ್ಣಾ ಹತ್ತು ರೂಪಾಯಿಗೆ ಒಂದು ಕ್ವಾಟರ್ ಸಿಗಲ್ಲ. ಈಗ ಒಂದು ಕ್ವಾಟರ್ ನಲವತ್ತು ರೂಪಾಯಿ ಆಗಿದೆ. ಈಗ ಗಂಡು ಮಕ್ಕಳು ಏನಂತವ್ರೆ, ಹೆಣ್ಮಕ್ಳು ಮಾತು ಕೇಳಿ ಕುಮಾರಣ್ಣ ನಮ್ಮನ್ನ ಹಾಳು ಮಾಡ್ಬಿಟ್ಟ ಅಂತಾರೆ.