ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸುಮಲತಾ ಮಾತಿಗೆ ಹೆಚ್ಡಿಕೆ ಹೇಳಿದ್ದೇನು..?

1 Min Read

 

ಮಂಡ್ಯ ಸಂಸದೆ ಸುಮಲತಾ ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಸ್ವತಂತ್ರ ಅವಬ್ಯರ್ಥಿಯಾಗಿ. ಈಗ ಬಿಜೆಪಿಗೆ ಸೇರಿದ್ದಾರೆ. ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿಯಾಗಿದೆ. ಹೀಗಾಗಿ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆಗಳು ಕಡಿಮೆ ಇದೆ. ಕ್ಷೇತ್ರ ಬದಲಾಯಿಸುತ್ತಾರಾ ಎಂದು ಕಾತುರದಿಂದ ನೋಡುತ್ತಿದ್ದವರಿಗೆ, ನೋ ವೇ ಚಾನ್ಸೆ ಇಲ್ಲ ಎಂಬಂತ ಉತ್ತರ ನೀಡಿದ್ದಾರೆ.

 

ದರ್ಶನ್ ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು ಕಳೆದಿವೆ. ಈ ಸುಸಂದರ್ಭವನ್ನು ಶ್ರೀರಂಗಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮ ಮಾಡುವ ಮೂಲಕ ಆಚರಣೆ‌ ಮಾಡಲಾಗಿತ್ತು. ಈ ವೇಳೆ ಸಂಸದೆ ಸುಮಲತಾ ಎದುರಾಳುಗಳಿಗೆ ಉತ್ತರ ನೀಡಿದ್ದಾರೆ. ದರ್ಶನ್ ಹಾಗೂ ಯಶ್ ಅಂದು ಚುನಾವಣೆಯ ಸಂದರ್ಭದಲ್ಲಿ ಜೊತೆಗೆ ನಿಂತ ಕ್ಷಣವನ್ನು ನೆನೆದಿದ್ದಾರೆ. ಮುಂದೆಯೂ ನನ್ನ ಜೊತೆಗೆ ಇರುತ್ತಾರೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮತ್ತೆ ಮಂಡ್ಯದಿಂದಾನೇ ನಿಲ್ಲುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಯಾವುದೇ ಕಾರಣಕ್ಕೂ ಮಂಡ್ಯವನ್ನು ಬಿಟ್ಟುಕೊಡುವುದಕ್ಕೆ ಸಾಧ್ಯವಿಲ್ಲ. ನಾಲ್ಕೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ, ಗೆಲ್ಲುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿದೆ. ಹೀಗಾಗಿ ಮಂಡ್ಯ ಬಿಡಲು ಸಾಧ್ಯವೇ ಇಲ್ಲ. ಸೋತ ಕಡೆಯೇ ಗೆಲ್ಲಬೇಕು ಎಂಬ ಹಂಬಲವಿದೆ. ಈಗ ಸುಮಲತಾ ಮಂಡ್ಯದಲ್ಲಿ ನಿಲ್ಲುತ್ತೇನೆ ಎಂಬುದನ್ನು ಒತ್ತಿ ಒತ್ತು ಹೇಳಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸಂತೋಷ ಸಂತೋಷ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *