ಜಾತಿಗಣತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

suddionenews
1 Min Read

ಮೈಸೂರು: ಬಿಹಾರದಲ್ಲಿ ಜಾತಿಗಣತಿ ವರದಿ ಸಲ್ಲಿಕೆಯಾದ ಮೇಲೆ ಕರ್ನಾಟಕದಲ್ಲೂ ಜಾತಿಗಣತಿ ವರದಿಗೆ ಒತ್ತಾಯ ಹೆಚ್ಚಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನವೆಂಬರ್ ತಿಂಗಳಲ್ಲಿ ವರದಿ ನನ್ನ ಕೈಸೇರಬಹುದು ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂತರಾಜು ಅಧ್ಯಕ್ಷರಾಗಿದ್ದಂತ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ವರದಿ ನೀಡಲಾಗಿತ್ತು. ಆದರೆ ಅವರು ಸ್ವೀಕರಿಸಿರಲಿಲ್ಲ. ಈಗ ಹೊಸ ಅಧ್ಯಕ್ಷರಿಗೆ ವರದಿ ನೀಡಲು ಕಾಂತರಾಜುಗೆ ಸೂಚನೆ ನೀಡಲಾಗಿದ್ದು, ನವೆಂಬರ್ ನಲ್ಲಿ ನನ್ನ ಕೈ ತಲುಪಬಹುದು. ಜಾತಿಗಣತಿ ವರದಿ ನನಗೆ ತಲುಪಿದ ಬಳಿಕ, ಅದನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.

ಜಾತಿ ಗಣತಿ ಸಮಾಜಕ್ಕೆ‌ ಮಾರಕವಲ್ಲ, ಅದು ಸಮಾಜವನ್ನು ವಿಭಜಿಸುವುದಿಲ್ಲ. ಯಾವ ಸಮುದಾಯಗಳು ಎಷ್ಟಿದೆ ಎಂಬ ವರದಿ ಸರ್ಕಾರಕ್ಕೆ ಬೇಕು‌. ಯೋಜನೆಗಳನ್ನು ಸಿದ್ಧಪಡಿಸುವುದಕ್ಕೂ ಇದು ಅತ್ಯವಶ್ಯಕ. ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೂ ಇದು ಅನುಕೂಲವಾಗಲಿದೆ ಎಂದಿದ್ದಾರೆ

ಇನ್ನು ರಾಜ್ಯದಲ್ಲಿ ಬರದ ಸ್ಥಿತಿ ಉಂಟಾಗಿದ್ದು, ಕೇಂದ್ರದಿಂದ ಬರ ಪರಿಶೀಲನೆಗೆ ತಂಡವನ್ನು ಕರೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಮಸ್ಯೆಯನ್ನು ಸರಿಯಾಗಿ ಆಲಿಸಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಬರ ಪ್ರವಾಸದ ಬಗ್ಗೆ ಕೇಂದ್ರ ಅಧಿಕಾರಿಗಳೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ನಾನು ಅವರಿಗೆ ಆ ಕಡೆ ಈ ಕಡೆ ಅಂತ ನಿರ್ದೇಶನ ಮಾಡುವುದಕ್ಕೆ ಆಗಲ್ಲ. ಕೇಂದ್ರದ ಬಳಿ ಬರಪರಿಹಾರವಾಗೊ 4,500 ಕೋಟಿ ಪರಿಹಾರ ಕೇಳಿದ್ದೇವೆ. ಈಗ ಕೇಂದ್ರ ತಂಡದ ವರದಿ ಆಧರಿಸಿ, ಪರಿಹಾರದ ಹಣ ತೀರ್ಮಾನವಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *