ಕಾರವಾರ: ಪ್ರತ್ಯೇಕ ರಾಜ್ಯ, ಪ್ರತ್ಯೇಕ ಜಿಲ್ಲೆಗೆ ಹಲವು ಭಾಗದಲ್ಲಿ ಆಗಾಗ ಕೂಗು ಕೇಳಿ ಬರುತ್ತಲೇ ಇರುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವುದಕ್ಕೂ ಮನವಿ ಮಾಡಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲಾ ಪ್ರವಾಸದಲ್ಲಿರುವ ಬೊನ್ಮಾಯಿ ಅವರು, ಶಿರಸಿಯಲ್ಲಿ ಮಾತನಾಡುತ್ತಾ, ಮೊದಲಿಗೆ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಮಾರಿಕಾಂಬೆಯ ಆಶೀರ್ವಾದ ಬೇಡಿದ್ದಾರೆ. ಬಳಿಮ ಮಾತನಾಡಿ, ಶಿರಸಿಯಲ್ಲಿ 42 ಕೋಟಿ ವೆಚ್ಚದ ಆಸ್ಪತ್ರೆ, 10 ಕೋಟಿ ಚಿಕ್ಕ ನೀರಾವರಿ ಯೋಜನೆ, 45 ಕೋಟಿ ಲೋಕೋಪಯೋಗಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಶಿರಸಿಯಲ್ಲಿ ಎನ್ವಿರಾನ್ಮೆಂಟ್ ವಿವಿ ಮಾಡುವ ಯೋಜನೆ ಮಾಡಿದ್ದೇವೆ. ಬರುವ ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗುತ್ತದೆ. ಅರಣ್ಯ ವಾಸಿಗಳು ಯಾವುದೇ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಒಕ್ಕರಲೆಬ್ಬಿಸುವ ಉದ್ದೇಶವಿಲ್ಲ. ಒಂದು ತಲೆಮಾರಿನವರನ್ನು ತೆಗದುಕೊಂಡು ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದ್ದೇವೆ. ಶಿರಸಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆಯೂ ಸಂಪುಟದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ.