ಬೆಂಗಳೂರು: ಮಾಜಿ ಸಚಿವರು ಹಾಗೂ ಹಾಲಿ ಸಚಿವರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ ಅದು ಡಿಕೆ ಶಿವಕುಮಾರ್ ಹಾಗೂ ಅಶ್ವತ್ಥ್ ನಾರಾಯಣ್ ನಡುವೆ. ಇದೀಗ ಅವರಿಬ್ಬರ ಮಾತಿನ ನಡುವೆ ಆದಿಚುಂಚನಗಿರಿ ಸ್ವಾಮೀಜಿ ಮಧ್ಯಪ್ರವೇಶ ಮಾಡಿದ್ದಾರೆ. ಇಬ್ಬರಿಗೂ ಕಿವಿ ಮಾತು ಹೇಳಿದ್ದಾರೆ.
ನನ್ನ ಫ್ರೆಂಡ್ ಗೆ ಹೇಳದೆ ಮತ್ಯಾರಿಗೆ ಹೇಳಲಿ. ಚರಿತ್ರೆ ಗೊತ್ತಿಲ್ಲ ಅಂದ್ರೆ ಚರಿತ್ರೆ ಸೃಷ್ಟಿಸೋಕೆ ಸಾಧ್ಯವಿಲ್ಲ. ಇತಿಹಾಸ ಗೊತ್ತಿರಬೇಕು ಅಲ್ವಾ. ಕೆಲವೊಂದು ಸಲ ಗೊತ್ತಿಲ್ಲದೆ ಇರೋದನ್ನ ನೆನಪಿಸಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ಡಿಕೆ ಶಿವಕುಮಾರ್ ಅವರ ಇತಿಹಾಸ ಗೊತ್ತಿಲ್ಲ ಎಂಬ ಮಾತಿಗೆ ಇದೀಗ ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ. ನಾನು ಡಿ.ಕೆ.ಶಿವಕುಮಾರ್ರನ್ನು ಪ್ರಶ್ನೆ ಮಾಡೋಕೆ ಕಾರಣ ಇದೆ. ನನಗೂ ರಾಮನಗರಕ್ಕೆ ಏನು ಸಂಬಂಧ ಎಂದು ಪ್ರಶ್ನೆ ಮಾಡಿದ್ದರು. ಯಾವ ಸರ್ಕಾರ ಕೂಡ ಕೊಡದಷ್ಟು ಯೋಜನೆಗಳನ್ನು ನಾವು ರಾಮನಗರಕ್ಕೆ ಕೊಟ್ಟಿದ್ದೇವೆ. ರಾಮನಗರವನ್ನು ಅಭಿವೃದ್ಧಿ ಮಾಡಿದ್ದೇವೆ. ಕೆಂಪಾಬುದಿಯಲ್ಲಿ ಇವರು ಘೋಷಣೆ ಮಾತ್ರ ಮಾಡಿದ್ರು ಆದ್ರೆ ಅಭಿವೃದ್ಧಿ ಮಾಡಿದ್ದೇವೆ ಎಂದಿದ್ದಾರೆ.