ಜೈಲಿನಿಂದ ಮನೆಗೆ ಬಂದ ಅಲ್ಲು ಅರ್ಜುನ್ ಹೇಳಿದ್ದೇನು..?

ಪುಷ್ಪ-2 ಸಿನಿಮಾದ ಶೋ ದಿನ ನಡೆದ ಅನಾಹುತಕ್ಕೆ ಅಲ್ಲು ಅರ್ಜುನ್ ಅವರನ್ನು ಹೈದ್ರಾಬಾದ್ ಪೊಲೀಸರು ಅರೆಸ್ಟ್ ಮಾಡಿದ್ದರು. ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೂ ನೀಡಲಾಗಿತ್ತು. ಆದರೆ ನಿನ್ನೆಯೇ ಅಲ್ಲು ಅರ್ಜುನ್ ಗೆ ಜಾಮೀನು ಕೂಡ ಸಿಕ್ಕಿದೆ. ಇಂದು ಜೈಲಿನಿಂದ ಮನೆಗೆ ಬಂದ ಅಲ್ಲು ಅರ್ಜುನ್, ಅಭಿಮಾನಿಗಳಿಗೋಸ್ಕರ ಪ್ರತಿಕ್ರಿಯೆ ನೀಡಿದ್ದಾರೆ.

‘ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಎಲ್ಲಾ ಅಭಿಮಾನಿಗಳಿಗೂ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಚಿಂತೆ ಮಾಡುವುದಕ್ಕೆ ಏನು ಇಲ್ಲ. ನಾನು ಆರಾಮಾಗಿ ಇದ್ದೀನಿ. ಕಾನೂನು ವ್ಯವಸ್ಥೆ ಮೇಲೆ ತುಂಬಾ ನಂಬಿಕೆ ಇದೆ. ನಾನು ಕಾನೂನು ವ್ಯವಸ್ಥೆಯನ್ನು ಗೌರವಿಸುತ್ತೇನೆ. ಮೃತ ಕುಟುಂಬಕ್ಕೆ‌ಮತ್ತೊಮ್ಮೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇದು ದುರದೃಷ್ಟಕರ ಘಟನೆ. ಸಂತ್ರಸ್ತ ಕುಟುಂಬಕ್ಕೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಈ ಘಟನೆಗೆ ವಿಷಾಧಿಸುತ್ತೇನೆ ಎಂದಿದ್ದಾರೆ.

ಅಲ್ಲು ಅರ್ಜುನ್ ಪೊಲೀಸರ ಜೊತೆಗೆ ಹೋದ ಕೂಡಲೇ ಮನೆಯಲ್ಲೆಲ್ಲಾ ಟೆನ್ಶನ್ ಆಗಿದ್ದರು. ಆದರೆ ಜೈಲಿನಿಂದ ಮನೆಗೆ ಬರುತ್ತಿದ್ದಂತೆ ಎಲ್ಲರೂ ಖುಷಿಯಿಂದ ಸ್ವಾಗತ ಮಾಡಿದರು. ಪತ್ನಿ ಸ್ನೇಹಾ ಆರತಿ ಬೆಳಗಿ, ದೃಷ್ಟಿ ತೆಗೆದರು‌. ಮಕ್ಕಳಂತು ಓಡಿ ಬಂದು ತಬ್ಬಿಕೊಂಡರು. ಅಲ್ಲು ಅರವಿಂದ್ ಅವರು ಮಗನನ್ನು ನೋಡಿ ಕಣ್ಣೀರು ಹಾಕಿದರು‌. ಉಷ್ಟಕ್ಕೆ ಮುಗಿಯತಲ್ಲ ಎಂಬ ಸಮಾಧಾನ ಅಲ್ಲು ಅರ್ಜುನ್ ಮನೆಯಲ್ಲಿದೆ. ಪುಷ್ಪ-2 ಕ್ರೇಜ್ ಏನು ಕಡಿಮೆ ಇರಲಿಲ್ಲ. ಹೀಗಾಗಿ ಥಿಯೇಟರ್ ಬಳಿ ಜನಸಂದಣಿ ಇತ್ತು. ಕಾಲ್ತುಳಿದಿಂದ ಆ ಮಹಿಳೆ ಸಾವನ್ನಪ್ಪಿದರು. ಸದ್ಯ ಪರಿಹಾರವನ್ನು ಘೋಷಿಸಿದ್ದಾರೆ. ಈಗ ಮತ್ತೊಮ್ಮೆ ಆಕೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *