ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಹೆಸರು ಫೈನಲ್ ಆಗಿದೆ. ಇನ್ನು ಎರಡೇ ದಿನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಸಿಎಂ ಆಗುವುದಕ್ಕೆ ಇದ್ದ ಮೊದಲ ಸವಾಲನ್ನು ಸಿದ್ದರಾಮಯ್ಯ ಅವರು ಗೆದ್ದಿದ್ದಾರೆ. ಡಿಕೆ ಶಿವಕುಮಾರ್ ಈ ಬಾರಿ ಸಿಎಂ ಗದ್ದುಗೆ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಅಂದಿದ್ರು. ಆದರೂ ಸಂಧಾನ ಸಭೆ ಸಫಲವಾಗಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಲಿದ್ದಾರೆ.
ಸಿಎಂ ಆದ ಬಳಿಕ ಸಿದ್ದು ಮುಂದೆ ಸಾಕಷ್ಟು ಸವಾಲುಗಳು ಎದ್ದು ಕಾಣುತ್ತಿವೆ. ಈ ಬಾರಿ ಬಹುಮತ ಪಡೆದು ಹೊರಹೊಮ್ಮಿದ ಕಾಂಗ್ರೆಸ್ ಪಕ್ಷವನ್ನು ಇನ್ನು ಮುಂದಿನ ಚುನಾವಣೆಯಲ್ಲೂ ಅಷ್ಟೇ ಸಲೀಸಾಗಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಾದ ದೊಡ್ಡ ಜವಬ್ದಾರಿ ಇದೆ.
ಸಾಲು ಸಾಲು ಚುನಾವಣೆಗಳು ಇನ್ನುಮುಂದೆ ಸಿಗಲಿದೆ. ಅದರಲ್ಲೂ ಕಳೆದ ಎರಡು ವರ್ಷದಿಂದ ಕಾಯುತ್ತಿರುವ ಬಿಬಿಎಂಪಿ ಚುನಾವಣೆಯ ಕಡೆಗೂ ಗಮನ ಕೊಡಬೇಕಾಗಿದೆ. 2024 ಲೋಕಸಭಾ ಚುನಾವಣೆ ಇನ್ನು ಬಹಳ ಮುಖ್ಯವಾಗಿರುತ್ತದೆ. ಜಿ.ಪಂ, ತಾಪಂ ಚುನಾವಣೆಯ ಜೊತೆಗೆ ದೊಡ್ಡ ಸವಾಲು ಇರುವುದು ಸದ್ಯ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಚಾಲ್ತಿಗೆ ತರಬೇಕಿದೆ. ಉಚಿತ ಸ್ಕಿಂಗಾಗಿಯೇ ಪ್ರತಿ ವರ್ಷಕ್ಕೆ 60-70 ಸಾವಿರ ಕೋಟಿ ಹಣ ಬೇಕಾಗುತ್ತದೆ