ಬಿಗ್ ಬಾಸ್ ಟಿವಿ ಶೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈಗ ಎಲ್ಲರ ಅಸಲಿ ಆಟ ಶುರುವಾಗಿದೆ. ಬಿಗ್ ಬಾಸ್ ನಲ್ಲಿ ಆರ್ಯವರ್ಧನ್ ಗುರೂಜಿಯ ಬಿಲ್ಡಪ್ ಮಾತುಗಳೇ ಕೇಳುವುದಕ್ಕೆ ಚೆಂದ ಎನಿಸುತ್ತದೆ. ಏನೇ ಹೇಳಿದರೂ ಅಲ್ಲಿಗೆ ತಮ್ಮ ಬೇಕರಿ ವಿಚಾರವನ್ನು ಎಳೆದು ತಂದಿರುತ್ತಾರೆ. ಇದೀಗ ವರ್ಕೌಟ್ ವಿಚಾರಕ್ಕೂ ಹಾಗೇ ಮಾಡಿದ್ದಾರೆ.
ಬೇಕರಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿಯೇ ಯಾವುದೇ ಕೆಲಸದ ಬಗ್ಗೆ ಮಾತನಾಡಿದರೂ ಮತ್ತೆ ಬೇಕರಿಗೆ ಹೋಗುತ್ತಾರೆ. ನಾವೂ ಎಷ್ಟು ನೋಡಿಲ್ಲ. ಬೇಕರಿಯಲ್ಲಿ ಎಷ್ಟು ಕೆಜಿ ಎತ್ತಿಲ್ಲ ಎಂದೆಲ್ಲಾ ಮಾತನಾಡುತ್ತಾರೆ. ವರ್ಕೌಟ್ ವಿಚಾರದಲ್ಲೂ ಬೇಕರಿ ಎಳೆದು ತಂದು ಇದೀಗ ನಾನು ಇದನ್ನೆಲ್ಲಾ ಆಗಲೇ ಮಾಡಿದ್ದೀನಿ ಎಂದಿದ್ದಾರೆ.
ರೂಪೇಶ್ ವರ್ಕೌಟ್ ಮಾಡುತ್ತಿದ್ದರು. ಸಾನ್ಯಾ ಕೂಡ ವರ್ಕೌಟ್ ಮಾಡಲು ಬಂದಿದ್ದಾರೆ. ಆಗ ತನ್ನ ಶಕ್ತಿಯ ಬಗ್ಗೆ ಮಾತನಾಡಿ, ಇದೆಲ್ಲ ನಾನು ಆಗಲೇ ಮಾಡಿದ್ದೆ ಎಂದಿದ್ದಾರೆ. ಅದಕ್ಕೆ ರೂಪೇಶ್ ಹೌದು ಅಪ್ಪಾಜಿ, ನಿಮ್ಮ ತೋಳುಗಳು ತುಂಬಾ ಸ್ಟ್ರಾಂಗ್ ಇದೆ. ಆದರೆ ಹೊಟ್ಟೆಯಿಂದ ಇದೆಲ್ಲಾ ಕಾಣುತ್ತಿಲ್ಲ. ಅದೇ ಅಪ್ಪಾಜಿ ನೀವೂ ಜೀವನದಲ್ಲಿ ಮಾಡಿರುವುದನ್ನು ನಾವೂ ಜಿಮ್ಮಲ್ಲಿ ಮಾಡುತ್ತಾ ಇದ್ದೀವಿ ಅಂತ ಹೇಳಿದ್ದಾನೆ.