ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಶಕ್ತಿ, ಗೃಹಜ್ಯೋತಿ ಈಗ ಗೃಹಲಕ್ಷ್ಮೀ ಯೋಜನೆ. ಹೊಸ ಸರ್ಕಾರ ರಚನೆಯಾದ ಮೇಲೆ ಮಹಿಳೆಯರೆಲ್ಲ ಹೆಚ್ಚು ಕಾಯುತ್ತಿದ್ದದ್ದು ಗೃಹಲಕ್ಷ್ಮೀ ಯೋಜನೆ ಯಾವಾಗಿಂದ ಬರುತ್ತೆ ಅಂತ. ಕಡೆಗೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದೆ. ಆದ್ರೆ ಮೂರು ದಿನದಿಂದ ಮಹಿಳೆಯರು ಅರ್ಜಿ ಸಲ್ಲಿಕೆಗೆ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ರೇಷನ್ ಕಾರ್ಡ್, ಆಧಾರ್ ಮಾರ್ಡ್, ಅಕೌಂಟ್ ಪಾಸ್ ಬುಕ್ ಬೇಕಾಗಿದೆ. ಮೂರು ದಿನದ ಹಿಂದೆಯೇ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗಿದೆ. ಆದ್ರೆ ಮೂರು ದಾಖಲೆಗಳನ್ನು ಹಿಡಿದುಕೊಂಡು ಮಹಿಳೆಯರು ಅರ್ಜಿ ಸಲ್ಲಿಸಲು ಬಂದರೆ ಅದೇ ಸರ್ವರ್ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ಅರ್ಜಿಸಲ್ಲಿಸುವ ಸಮಯಕ್ಕೆ ಸರಿಯಾಗಿ ಸರ್ವರ್ ಡೌನ್ ಅನ್ನೋದು ಮಹಿಳೆಯರ ಎನರ್ಜಿಯನ್ನೇ ಡೌನ್ ಮಾಡಿಟ್ಟಿದೆ.
ಮೊಬೈಲ್ ನಂಬರ್ ಗೆ ಅರ್ಜಿ ಹಾಕಿದ ಮೇಲೆ ಒಂದು ಮೆಸೇಜ್ ಬರುತ್ತೆ. ಆದ್ರೆ ಸರ್ವರ್ ಸಮಸ್ಯೆಯಿಂದಾಗಿ ಆ ಮೆಸೇಜ್ ಬರುತ್ತಿಲ್ಲ, ಅರ್ಜಿ ಅಗ್ರೀ ಆಗುತ್ತಿಲ್ಲ. ಇದರ ಮಧ್ಯೆ ಮೊದಲ ದಿನವೇ 60 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ.