ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಗ್ರಾಮಪಂಚಾಯತ್ ಚುನಾವಣೆ ನಡೆದಿದೆ. ಈ ಚುನಾವಣೆ ನಡೆಯುವುದಕ್ಕೂ ಮುನ್ನ ಸಾಕಷ್ಟು ಗಲಾಟೆ ಆಗಿತ್ತು. ಹೊಡೆದಾಟ, ಬಡಿದಾಟವೂ ನಡೆದಿತ್ತು. ಇಷ್ಟು ಜಿದ್ದಾಜಿದ್ದಿನ ನಡುವೆಯೂ ಟಿಎಂಸಿ ಪಕ್ಷ ಅಧಿಕಾರಕ್ಕೆ ಬರುವ ಸೂಚನೆ ಇದೆ. ಅಧಿಜೃತ ಘೋಷಣೆಯೊಂದೆ ಬಾಕಿ ಇದೆ. ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ.
ಜೂನ್ 8ರಂದು ಪಶ್ಚಿಮ ಬಂಗಾಳ ಗ್ರಾಮ ಪಂಚಾಯತ್ ಚುನಾವಣೆ ನಡೆದಿದೆ. ಒಟ್ಟು 63,229 ಸ್ಥಾನಗಳಿಗೆ ಮತದಾನ ನಡೆದಿದೆ. ಸದ್ಯದ ಮತ ಎಣಿಕೆ ಪ್ರಕಾರ ಟಿಎಂಸಿ ಪಕ್ಷವೇ ಮುನ್ನಡೆ ಸಾಧಿಸಿದೆ. 61 ಸಾವಿರ ಬೂತ್‌ನಲ್ಲಿ ಮತದಾನ ನಡೆದಿತ್ತು. 696 ಬೂತ್ ಗಳಲ್ಲಿ ಮರು ಮತದಾನ ನಡೆದಿತ್ತು.
ಚುನಾವಣೆ ಮುಗಿದ ಬಳಿಕ ಗಲಾಟೆ ಶುರುವಾಗಿತ್ತು. ಈ ಗಲಾಟೆಯ ನಡುವೆ ಬ್ಯಾಲೆಟ್ ಬಾಕ್ಸ್ ಹೊತ್ತು ಓಡಿತ್ತಿರುವ ದೃಶ್ಯ ವೈರಲ್ ಆಗಿತ್ತು. ಕಳೆದ ಬಾರಿಯ ಪಂಚಾಯ್ ಚುನಾವಣೆಯಲ್ಲಿ ಟಿಎಂಸಿ ಪಕ್ಷ ಎಲ್ಲಾ 22 ಜಿಲ್ಲಾ ಪರಿಷತ್ ಗೆದ್ದಿತ್ತು. ಶೇಕಡಾ 90ರಷ್ಟು ಸೀಟುಗಳನ್ನು ಗೆದ್ದಿದ್ದ ಟಿಎಂಸಿಗೆ ಈ ಬಾರಿಯ ಚುನಾವಣೆ ಫಲಿತಾಂಶ ಪ್ರತಿಷ್ಟೆಯಾಗಿದೆ.