ಮಂಡ್ಯ: ನಮಗೆ ಯಾವುದು ಅತಂತ್ರವಿಲ್ಲ. ಶಕ್ತಿ ಇರುವವರು ಏನು ಅಡ್ಡ ಬರಲ್ಲ ಮತ್ತೆ ಮತ್ತೆ ನಾವೇ ಅಧಿಕಾರಕ್ಕೆ ಬರ್ತೀವಿ. 23 ನಾವೇ 28 ನಾವೇ. ನಮ್ಮದೇ ಆಡಳಿತ ನಾವೇ ನಡೆಸುವುದು. ನಮ್ಮದೇ ರಾಜ್ಯಭಾರ. ನಮ್ಮದೇ ಪ್ರಜಾಪ್ರಭುತ್ವ. ಸಂಸದೆ ಸುಮಲತಾ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಅವರು ಬರಲಿ ಎಂಬುದೇ ನಮ್ಮ ಆಸೆ. ಒಳ್ಳೆಯದು ಬರಲಿ ನಮ್ಮ ಪಕ್ಷಕ್ಕೆ ಎಂದು ಸುಮಲತಾ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕ್ಯಾಬಿನೆಟ್ ಪುನರ್ ರಚನೆ ಬಗ್ಗೆ ಮಾತನಾಡಿ, ಇದು ನನ್ನ ವಿಚಾರಣೆಯಲ್ಲ. ಅದು ಮುಖ್ಯಮಂತ್ರಿ ವಿಚಾರಣೆ. ನಾನು ಅವರ ಪರವಾಗಿ ಮಾತನಾಡಲು ಆಗಲ್ಲ ಅವರೇ ಮಾತನಾಡುತ್ತಾರೆ ಎಂದಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿಯ ಮಹಾನಾಯಕನ ವಿಚಾರಕ್ಕೆ ಮಾತನಾಡಿ, ಹೇಳಿಕೆ ಕೊಟ್ಟಿರುವವರಿಗೆ ನಾನೂ ಸಾಕ್ಷಿಯಲ್ಲ. ಅವರವರ ಬಳಿಯೇ ಕೇಳಿಕೊಳ್ಳಿ. ಅವರು ಏನು ಹೇಳಿಕೆ ಕೊಡುತ್ತಾರೋ ನಾನೇನ್ ಸಾಕ್ಷಿ ಕೊಡಲಿ. ಅವರವರ ಮಾತಿಗೆ ಅವರೇ ಹೊಣೆ. ನಾನಂತು ಅಲ್ಲ.
ಕುಮಾರಸ್ವಾಮಿ ಬಗ್ಗೆ ಮಾತನಾಡಿ, ಅವರ ಬಗ್ಗೆ ನಿಮಗೂ ಚೆನ್ನಾಗಿಯೇ ಗೊತ್ತು. ಅವರ ಎಲ್ಲಾ ಆಟನೂ ನೋಡಿರ್ತೀರಾ. ಯಾವ್ಯಾವ ಸಂದರ್ಭದಲ್ಲಿ ಇಷ್ಟು ವರ್ಷದಲ್ಲಿ ಅವರ ಪ್ರತಿಭೆಯನ್ನು ನೋಡಿದ್ದೀರಿ. ಹೀಗಾಗಿ ನೀವೇ ಅಳತೆ ಮಾಡಬೇಕು. ನಾವಂತು ಅವರ ಸಹವಾಸ ಮಾಡಲ್ಲ ಸ್ವಾಮಿ. ಮುಂದಿನ ಚುನಾವಣೆಯಲ್ಲೂ ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಯಾವುದೇ ಸಂಬಂಧವನ್ನು, ಇನ್ನೊಂದು ಮತ್ತೊಂದು ಅದಕ್ಕಿಂತ ಪಾಪದ ಕೆಲಸ ಮತ್ತೊಂದಿಲ್ಲ. ಸಾಕು ತಿರಸ್ಕಾರ ಮಾಡಿರುವವರನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡೋಣಾ. ಅವರನ್ನು ಬಹಿಷ್ಕಾರ ಹಾಕಿ, ನಮಸ್ಕಾರ ಮಾಡಿ ಬಿಜೆಪಿ ಪ್ರತಿನಿದ್ಇಯನ್ನು ಆಯ್ಕೆ ಮಾಡುವ ಕೆಲಸ ಮಾಡೋಣಾ ಎಂದಿದ್ದಾರೆ.