ವೀಕೆಂಡ್ ವಿತ್ ರಮೇಶ್ ಸೀಸನ್ 5 ಶುರಿವಾಗಿದೆ. ಮೊದಲ ಅತಿಥಿಯಾಗಿ ನಟಿ ರಮ್ಯಾ ಬಂದಿದ್ದಾರೆ. ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಮ್ಯಾ ಎಪಿಸೋಡ್ ಗೆ ಸಾಕಷ್ಟು ಪಾಸಿಟಿವ್ ಅಂಡ್ ನೆಗೆಟಿವ್ ಕಮೆಂಟ್ಸ್ ಗಳು ಹೊರ ಬಂದಿದೆ.
ಸಂಚಿಕೆ ಪ್ರಸಾರಕ್ಕೂ ಮುನ್ನವೇ ಜೀ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರ ಪ್ರೋಮೋಗಳನ್ನು ಬಿಡಲಾಗಿತ್ತು. ಈ ಪ್ರೋಮೋಗಳು ನಿರೀಕ್ಷೆಯನ್ನು ಹೆಚ್ಚಿಸಿದ್ದವು. ಅಷ್ಟೇ ಹೆಚ್ಚಾಗಿ ಟ್ರೋಲ್ ಗೂ ಗುರಿಯಾಗಿಸಿತ್ತು. ಇಷ್ಟು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದ ರಮ್ಯಾ, ರಾಜಕೀಯ ರಂಗವನ್ನು ನೋಡಿ ಬಂದಿದ್ದರು. ಎಲ್ಲದರ ಅನುಭವವನ್ನು ಸಾಧಕರ ಖುರ್ಚಿ ಮೇಲೆ ಕೂತು ಹಂಚಿಕೊಳ್ಳುತ್ತಾರೆ ಎಂದು ಮನೆ ಮಂದಿಯೆಲ್ಲಾ ಕುಳಿತು ನೋಡುವಾಗ ನೋಡುಗರಿಗೆ ಅದು ಶಾಕ್ ತರಿಸಿತ್ತು.
ನಟಿ ರಮ್ಯಾ ಕಾರ್ಯಕ್ರಮದಲ್ಲಿ ಕನ್ನಡಕ್ಕಿಂತ ಹೆಚ್ಚು ಮಾತನಾಡಿದ್ದು ಇಂಗ್ಲಿಷ್ ಭಾಷೆಯನ್ನೇ ಹೀಗಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ರಾಘವೇಂದ್ರ ಹುಣಸೂರ್ ಅವರಿಗೆ ಟ್ಯಾಗ್ ಮಾಡುತ್ತಾ, ಇದೇನೂ ಇಂಗ್ಲೀಷ್ ಪ್ರೋಗ್ರಾಂ ಹ, ಕಂಗ್ಲೀಷ್ ಪ್ರೋಗ್ರಾಂ ಹ ಅಂತ ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಮುಂದೆ ಹೋಗಿ ರಶ್ಮಿಕಾ ಹಾಗೂ ರಮ್ಯಾ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಅವರು ತತ್ಸಮ ಆದ್ರೆ ಇವರು ತದ್ಭವ ಎಂದು ಟ್ರೋಲ್ ಮಾಡುತ್ತಿದ್ದಾರೆ.





GIPHY App Key not set. Please check settings