ಬೆಂಗಳೂರು: ಕೊರೊನಾ ಕಂಟ್ರೋಲ್ ಗೆಂದು ವಿಧಿಸಿದ್ದ ವೀಕೆಂಡ್ ಕರ್ಫ್ಯೂ ಕ್ರಮವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದೆ. ಆದ್ರೆ ನೈಟ್ ಕರ್ಫ್ಯೂ ಮುಂದುವರೆಸಿದ್ದು, ಕಠಿಣ ಮಾಡಲು ನಿರ್ಧರಿಸಿದ್ದಾರೆ.
ಈ ಸಂಬಂಧ ಮಾತನಾಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ನೈಟ್ ಕರ್ಫ್ಯೂ ಕಠಿಣವಾಗಿರಲಿದೆ. ಯಾರು ಕೂಡ ಇನ್ಮುಂದೆ ಸುಮ್ ಸುಮ್ನೆ ಓಡಾಡುವಂತಿಲ್ಲ. ಭದ್ರತೆ ಈಗ ಹೇಗಿತ್ತೋ ಇನ್ಮುಂದೆಯೋ ಹಾಗೇಯೇ ಇರಲಿದೆ.
ಸರ್ಕಾರದ ನಿರ್ಧಾರದಿಂದ ಜನರ ಹೊಣೆಗಾರಿಕೆ ಜಾಸ್ತಿ ಇದೆ. ನಮ್ಮ ಆರೋಗ್ಯ, ನಮ್ಮ ಪ್ರಾಣ ನಮ್ಮ ಕೈನಲ್ಲಿದೆ. ಹೀಗಾಗಿ ಜನರು ಕೂಡ ಜವಬ್ದಾರಿಯಿಂದ ನಡೆದುಕೊಳ್ಳಬೇಕು. ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದ್ರೆ ಲಾಕ್ಡೌನ್ ಕೂಡ ಆಗಬಹುದು. ಹೀಗಾಗಿ ಜನರು ಕೂಡ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಕೊರೊನಾ ನಿಯಮಗಳನ್ನ ಪಾಲನೆ ಮಾಡಬೇಕು. ನೈಟ್ ಕರ್ಫ್ಯೂ ಮುಂದುವರೆಯುವುದರಿಂದ ಹೆಚ್ಚು ಸ್ಟ್ರಿಕ್ಟ್ ಆಗಿರಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.