ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಅಪ್ಲೈ ಆಗಲಿದೆ.
ಹೀಗಾಗಿ ಹೊರಗೆ ಹೋಗುವ ಮುನ್ನ ಸ್ವಲ್ಪ ಜನ ಎಚ್ಚರಿಂದ ಇರಬೇಕು. ಜೊತೆಗೆ ಏನೆಲ್ಲಾ ಸಿಗುತ್ತೆ..? ಏನೆಲ್ಲಾ ಸಿಗಲ್ಲ ಎಂಬ ಮಾಹಿತಿಯೂ ನಿಮಗಾಗಿ ಇಲ್ಲಿದೆ. ಶುಕ್ರವಾರ ಅಂದ್ರೆ ಇಂದು ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾದರೆ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಗಿಯಲಿದೆ.
ಪೊಲೀಸರು ಕೂಡ ಈಗಾಗಲೇ ವೀಕೆಂಡ್ ಕರ್ಫ್ಯೂ ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವೇಳೆ ಹಣ್ಣು, ತರಕಾರಿ, ದಿನಸಿ ಅಂಗಡಿ, ಹಾಲು, ಆಸ್ಪತ್ರೆ, ಮೆಡಿಕಲ್, ಹೋಮ್ ಡೆಲಿವರಿ, ಐಟಿ ಕಂಪನಿ, ಕೈಗಾರಿಕೆ, ಬೀದಿ ಬದಿ ವ್ಯಾಪಾರ, ರೈಲು, ವಿಮಾನ, ಟ್ಯಾಕ್ಸಿ, ಆಟೋ, ಹೊಟೇಲ್ ಪಾರ್ಸಲ್, ಸರ್ಕಾರಿ ಕಚೇರಿ ಮಾತ್ರ, ಬ್ಯಾಂಕ್, ಕೆಎಸ್ಆರ್ಟಿಸಿ 50-50, ಮೆಟ್ರೋ 50-50 ಇರುತ್ತೆ.
ಇನ್ನು ಮದ್ಯದ ಅಂಗಡಿ, ಬಿಎಂಟಿಸಿ, ಥಿಯೇಟರ್, ಮಾಲ್, ಜಿಮ್, ಶಾಲಾ ಕಾಲೇಜು, ಪಾರ್ಕ್, ತರಬೇತಿ ಕೇಂದ್ರ, ಅನಗತ್ಯ ಸಂಚಾರಕ್ಕೆ ಅನುಮತಿ ಇಲ್ಲ.