ಸುದ್ದಿಒನ್ ವೆಬ್ ಡೆಸ್ಕ್
ಕೆಲವರು ತಮ್ಮ ಆಲೋಚನೆಗಳನ್ನು ಹೊರಗೆ ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಅದರಿಂದ ಅವರಿಗೆ ಯಾವುದೇ ಪ್ರಯೋಜನವಾಗುವುಲ್ಲ. ಪರಿಸ್ಥಿತಿ ಕೈ ಮೀರಿದಾಗ ಮಾತ್ರ ಹಾಗೆ ಮಾಡಬೇಕಿತ್ತ, ಹೀಗೆ ಮಾಡಬೇಕಿತ್ತು ಎಂದು ಅವರು ಭಾವಿಸುತ್ತಾರೆ. ಅದಕ್ಕೇ ಹೇಳುವುದು ಅನಿಸಿದ್ದನ್ನು ಮಾಡಬೇಕು ಹೊರಗೆ ಆ ವಿಚಾರವಾಗಿ ಹೇಳಿಕೊಳ್ಳಬೇಕು.
ಶಿಕ್ಷಕರೊಬ್ಬರು ತಮ್ಮ ಶಿಷ್ಯರಿಗಾಗಿ ಒಂದು ಸೈಕಲ್ ಅನ್ನು ತಂದರು. ನಾನು ಕೇಳುವ ಪ್ರಶ್ನೆಗೆ ಯಾರು ಸರಿಯಾದ ಉತ್ತರ ಕೊಡುತ್ತೀರೋ ಅವರಿಗೆ ಮಾತ್ರ ಕೊಡುತ್ತೇನೆ ಎಂದು ಷರತ್ತು ಹಾಕಿದರು.
ನಿಮಗೆ ಸೈಕಲ್ ಏಕೆ ಬೇಕು ? ನೀವು ಯಾಕೆ ಸೈಕಲ್ ಓಡಿಸಲು ಬಯಸುತ್ತೀರಿ? ಎಂದು ಗುರುಗಳು ಕೇಳಿದರು. ಸರಿಯಾದ ಉತ್ತರ ನೀಡಿದವರಿಗೆ ನೀಡುವುದಾಗಿ ಹೇಳಿದರು. ಆದರೆ ಗುರುವಿಗೆ ಐವರು ಬೇರೆ ಬೇರೆ ಉತ್ತರ ಕೊಟ್ಟರು.
ಮೊದಲ ಶಿಷ್ಯ ಹೇಳಿದ. ‘ಪ್ರತಿದಿನ ಹೊರಗೆ ಹೋಗಿ ತರಕಾರಿ ತರುವುದು ಕಷ್ಟ. ನನ್ನ ಬಳಿ ಸೈಕಲ್ ಇದ್ದರೆ ಬೇಗ ಹೋಗಿ ತರಬಹುದು. ತರಕಾರಿಗಳನ್ನು ಬೆನ್ನ ಮೇಲೆ ಹೊತ್ತು ತರುವುದಕ್ಕಿಂತ ಸೈಕಲ್ ನಲ್ಲಿ ತರುವುದು ಸುಲಭ’ ಎಂದು ಹೇಳಿದ.
ಎರಡನೇ ಶಿಷ್ಯ ಹೇಳಿದ..’ನಾನು ಪ್ರಕೃತಿಯನ್ನು ಆನಂದಿಸಲು ಸೈಕಲ್ ಓಡಿಸುತ್ತೇನೆ ಎನ್ನುತ್ತಾನೆ.
ಮೂರನೆಯ ಶಿಷ್ಯ ಹೇಳಿದ.. ಸೈಕಲ್ ತುಳಿಯುವಾಗ ಮಂತ್ರ ಜಪಿಸುತ್ತಲೇ ಇರುತ್ತೇನೆ ಎಂದನು.
ನಾಲ್ಕನೇ ಶಿಷ್ಯ ಹೇಳುತ್ತಾನೆ ನಾನು ಎಲ್ಲರಿಗಿಂತ ಮೊದಲು ಬರಲು ಸೈಕಲ್ ಓಡಿಸುತ್ತೇನೆ ಎಂದನು.
ಐದನೇ ಶಿಷ್ಯನು ಮಾತ್ರ ನನಗೆ ಸೈಕಲ್ ಓಡಿಸುವುದು ಇಷ್ಟ ಹಾಗಾಗಿ ಸೈಕಲ್ ಬೇಕು ಎಂದು ಹೇಳುತ್ತಾನೆ.
ಮೊದಲ ನಾಲ್ವರು ಶಿಷ್ಯರು ಮಾತ್ರ ಗುರುವಿನಿಂದ ಒಳ್ಳೆ ಹೆಸರು ತಂದುಕೊಳ್ಳಲು, ಒಳ್ಳೆಯವನೆಂದು ಅನ್ನಿಸಿಕೊಳ್ಳಲು ಮನಸ್ಸಿನಲ್ಲಿಯೇ ಸತ್ಯವನ್ನು ಬಚ್ಚಿಟ್ಟುಕೊಂಡು ಬೇರೆ ಬೇರೆ ಉತ್ತರಗಳನ್ನು ನೀಡಿದರು. ಆದರೆ ಅಂತಿಮವಾಗಿ ಹೇಳಿದ ಶಿಷ್ಯನು ಸತ್ಯವನ್ನು ಹೇಳಿದನು. ಶಿಕ್ಷಕ ಐದನೇಯವನ ಉತ್ತರವನ್ನು ಇಷ್ಟಪಡುತ್ತಾನೆ ಮತ್ತು ಅವನಿಗೆ ಸೈಕಲ್ ನೀಡುತ್ತಾನೆ. ಏಕೆಂದರೆ ಅವನು ತನ್ನ ಮನಸಿಗೆ ಅನಿಸಿದ್ದನ್ನು ಹೇಳಿದನು. ಆದರೆ ಉಳಿದ ನಾಲ್ವರು ಮಾತ್ರ ಗುರುಗಳನ್ನು ಮೆಚ್ಚಿಸಲು ಇಲ್ಲದ್ದನ್ನು ಹೇಳಿದರು. ಹಾಗಾಗಿ ಜೀವನದಲ್ಲಿ ನಾವು ಯಾರನ್ನೋ ಮೆಚ್ಚಿಸಲು ಏನನ್ನೋ ಹೇಳಲು ಹೋಗಿ ನಾವು ಹಗುರವಾಗಬಾರದು. ಇದ್ದದ್ದನ್ನು ಇದ್ದ ಹಾಗೆಯೇ ಹೇಳಬೇಕು. ಏಕೆಂದರೆ ನಾವು ಹೇಳುವುದು ಸರಿಯೋ ತಪ್ಪೋ ಎನ್ನುವುದು ಎದುರಿನವರಿಗೆ ತಿಳಿಯುತ್ತದೆ. ಹಾಗಾಗಿ ಯಾವುದೋ ಉದ್ದೇಶದಿಂದ ಏನನ್ನೋ ಹೇಳಬಾರದು.