ಮೈಸೂರು: ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇತ್ತ ರಾಹುಲ್ ಗಾಂಧಿ ಯಶಸ್ವಿಯಾಗಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಸಾಗುವ ಈ ಯಾತ್ರೆ ಈಗಾಗಲೇ ಕೊಡಗು ತಲುಪಿದೆ. ಹೀಗಾಗಿ ಮಗನನ್ನು ನೋಡುವುದಕ್ಕೆ, ಚರ್ಚೆ ಮಾಡುವುದಕ್ಕೆ ಸೋನಿಯಾ ಗಾಂಧಿ ರಾಜ್ಯಕ್ಕೆ ಬಂದಿಳಿದಿದ್ದಾರೆ. ಆದರೆ ಮಡಿಕೇರಿಗೆ ಹೋಗಬೇಕಾದ ಬೇಟಿ ರದ್ದಾಗಿದೆ.
ದೆಹಲಿಯಿಂದ ಮೈಸೂರಿಗೆ ಬಂದಿಳಿದಿರುವ ಸೋನಿಯಾ ಗಾಂಧಿ ಇಂದು ಸಂಜೆ ವೇಳೆ ಮೈಸೂರಿನಿಂದ ಕೊಡಗಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ ಹವಮಾನ ವೈಪರೀತ್ಯದಿಂದ ಈ ಭೇಟಿ ರದ್ದಾಗಿದೆ. ಹೆಲಿಕಾಪ್ಟರ್ ಲ್ಯಾಂಡ್ ಆಗುವುದಕ್ಕೆ ಸಮಸ್ಯೆಯಾಗುವ ಕಾರಣದಿಂದ ಈ ಭೇಟಿಯನ್ನು ರದ್ದು ಮಾಡಲಾಗಿದೆ.
ಹೆಲಿಕಾಪ್ಟರ್ ಬಿಟ್ಟು ರಸ್ತೆ ಮಾರ್ಗದಲ್ಲಿ ಪ್ರಯಾಣ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿತ್ತು. ಆದರೆ ಸೋನಿಯಾ ಗಾಂಧಿಯವರ ಆರೋಗ್ಯ ಅಷ್ಟು ಸರಿಯಿಲ್ಲದ ಕಾರಣ ರಸ್ತೆ ಪ್ರಯಾಣವನ್ನು ಸೋನಿಯಾ ಗಾಂಧಿ ಅವರೇ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇನ್ನು ಎರಡು ದಿನಗಳ ಕಾಲ ಕಬಿನಿ ಬಳಿಯ ರೆಸಾರ್ಟ್ ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.