ಡಿಕೆಶಿಯನ್ನ ಸಿಎಂ ಮಾಡಿಯೇ ಮಾಡ್ತೀವಿ ; ನೊಣವಿನಕೆರೆ ಸ್ವಾಮೀಜಿಯಿಂದ ಮತ್ತೆ ಭವಿಷ್ಯ..!

suddionenews
1 Min Read

 

ಗದಗ; ಸದ್ಯ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗಬೇಕು ಎಂಬುದೇ ಇರುವ ಆಕಾಂಕ್ಷೆ. ಅದಕ್ಕಾಗಿ ತಾಳ್ಮೆಯಿಂದ ಕಾಯುತ್ತಾ ಇದ್ದಾರೆ. ಹೈಕಮಾಂಡ್ ಸೂಚನೆ ಮೇರೆಗೆ ತಾಳ್ಮೆಯಿಂದ ಕಾಯ್ತಾ ಇದಾರೆ. ಇದರ ನಡುವೆ ಕಳೆದ ವರ್ಷ ಅಕ್ಟೊಬರ್ ತಿಂಗಳಲ್ಲಿ ನುಡಿದಿದ್ದ ಭವಿಷ್ಯವನ್ನು ನೊಣವಿನಕೆರೆ ಸ್ವಾಮೀಜಿಯವರು ಮತ್ತೆ ಪುನರ್ ಉಚ್ಛರಿಸಿದ್ದಾರೆ.

ನೊಣವಿನಕೆರೆ ಸ್ವಾಮಿಗಳು ಎಂದರೆ ಡಿಕೆ ಶಿವಕುಮಾರ್ ಅವರಿಗೆ ನಂಬಿಕೆ ಜಾಸ್ತಿ. ಏನೇ ಒಂದು ಕೆಲಸಕ್ಕೆ ಕೈ ಹಾಕುವಾಗಲೂ ನೊಣವಿನಕೆರೆ ಸ್ವಾಮಿಗಳ ದರ್ಶನ ಮಾಡಿ, ಅಲ್ಲಿನ ಸ್ವಾಮೀಜಿಯ ಆಶೀರ್ವಾದ ಪಡೆಯುವುದನ್ನು ಮಾತ್ರ ಮಿಸ್ ಮಾಡ್ತಾ ಇರಲಿಲ್ಲ. ಇದೀಗ ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಕರಿವೃಷಭ ದೇಶಿ ಕೇಂದ್ರ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿಗಳು ಈ ಬಗ್ಗೆ ಮತ್ತೆ ಭವಿಷ್ಯ ನುಡಿದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಕೂಡ ಹೇಳಿದ್ದೆ ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿಸುತ್ತೇನೆ. ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ನಮ್ಮ ಮಠದ ಭಕ್ತರು. ಅವರನ್ನು ಮುಖ್ಯಮಂತ್ರಿಯಾಗಿಸುತ್ತೇವೆ.

ಅವರು ಮುಖ್ಯಮಂತ್ರಿಯಾದ ಮೇಲೆ ಮುಕ್ತಿಮಂದಿರ, ತ್ರಿಕೋಟಿ ಶಿವಲಿಂಗವನ್ನು ಪುನರ್ ಸ್ಥಾಪನೆ ಮಾಡಿಸುತ್ತೇವೆ ಎಂದಿದ್ದಾರೆ. ಕಳೆದ ಬಾರಿಯೂ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ವಿಚಾರದ ಬಗ್ಗೆ ಹೇಳಿದ್ದರು. ಆದರೆ ಯಾವಾಗ ಮಾಡಬಹುದು ಎಂಬುದನ್ನು ಹೇಳಿರಲಿಲ್ಲ. ಇದೀಗ ಮತ್ತೆ ಮುಖ್ಯಮಂತ್ರಿ ಮಾಡುವ ಬಗ್ಗೆ ಉಚ್ಛಾರಣೆ ಮಾಡಿದ್ದಾರೆ. ಮುಂದೊಂದು ದಿನ ಅವರು ಮುಖ್ಯಮಂತ್ರಿ ಆಗಿಯೇ ಆಗ್ತಾರೆ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅಪಾರವಾಗಿ ನಂಬುವ ಮಠಾಧೀಶರೆ ಈ ಮಾತನ್ನು ಹೇಳಿದಾಗ ಅವರ ಬೆಂಬಲಿಗರಲ್ಲಿ ಅತೀವ ಸಂತಸ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *