ಬೆಂಗಳೂರು: ಬಿಜೆಪಿ ಆಡಳಿತದಲ್ಲಿದ್ದಾಗ ನಡರದ ಹಗರಣಗಳ ಬಗ್ಗೆ ನಡೆಸುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಜ್ ಖರ್ಗೆ, ಬಿಟ್ ಕಾಯಿನ್, ಗಂಗಾ ಕಲ್ಯಾಣ, ಕೊರೊನಾ ವೇಳೆ ನಡೆದ ಭ್ರಷ್ಟಾಚಾರದ ಸೇರಿ ತನಿಖೆ ನಡೆಸುತ್ತೇವೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸೈಬರ್ ಎಕ್ಸ್ಪರ್ಟ್ ಬೇಕು. ಕೆಲವೊಂದು ನ್ಯಾಯಾಂಗ ತನಿಖೆ ಆಗುತ್ತೆ. ತನಿಖೆ ಮಾಡಿಸುತ್ತೇವೆ ಎಂದು ಮಾತು ಕೊಟ್ಟಿದ್ದೆವು ಅದಕ್ಕರ ಬದ್ಧವಾಗಿದ್ದೇವೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ2 ಎಫ್ಐಆರ್ ದಾಖಲಾಗಿದೆ. ತನಿಖಾ ತಂಡಕ್ಕೆ ಆ ಬಗ್ಗೆ ಮಾಹಿತಿ ನೀಡುತ್ತೇವೆ.
ಹೆಚ್ಚುವರಿ ಅಕ್ಕಿ ನೀಡುವ ವಿಚಾರವಾಗಿ ಮಾತನಾಡಿ, ಯಾವುದೇ ಸರ್ಕಾರ ಇದ್ದರು ಜನ ಕಲ್ಯಾಣ ಮುಖ್ಯವಾಗಬೇಕು. ಹಾಗಾಗಿ ನಾವೂ ಅನ್ನ ಭಾಗ್ಯ ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರ ಖಾಸಗಿಗೆ ಅಕ್ಕಿ ಕೊಡ್ತೇವೆ ಅಂತ ಹೇಳುತ್ತಿದೆ. ರಾಜ್ಯ ಸರ್ಕಾರ ದುಡಿಯುವ ಕೈ ಬಲ ಪಡಿಸುತ್ತಿದೆ ಎಂದಿದ್ದಾರೆ.
ಇನ್ನು ಬಿಜೆಪಿಯವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರಂತೆ. ದೆಹಲಿಗೆ ಹೋಗಿ ಪ್ರತಿಭಟನೆ ಮಾಡಲಿ. ತಾಕತ್ತು ಇದ್ದರೆ ಅಲ್ಲಿ ಕೇಳಲಿ. ಇಲ್ಲಿ 25 ಸಂಸದರಿದ್ದಾರಲ್ಲ ಅವರೆಲ್ಲ ಅಲ್ಲಿ ಹೋಗಿ ಕೇಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.