Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಭೂಮಿ ಬಿಟ್ಟುಕೊಡುವ ರೈತರಿಗೆ ಒಳ್ಳೆಯ ರೇಟ್ ಕೊಡ್ತೇವೆ : ಸಚಿವ ಎಂಬಿ ಪಾಟೀಲ್

---Advertisement---

ಬೆಂಗಳೂರು: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಕೆಐಎಡಿಬಿಯಿಂದ ಭೂಸ್ವಾಧೀನ ವಿರೋಧಿಸಿ ರೈತರು ಹಲವು ದಿನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಸ್ವಾಧೀನ ವಿಚಾರದಲ್ಲಿ ರೈತರು ಪರ – ವಿರೋಧ ಇದ್ದಾರೆ. ಇದೆ ವೇಳೆ ಭೂಸ್ವಾಧೀನದ ಪರವಾಗಿರುವ ಮತ್ತೊಂದು ರೈತರ ಗುಂಪು ಜಮೀನು ಕೊಡಲು ಮುಂದಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಭೂಸ್ವಾಧೀನ ಸಂಬಂಧ ರೈತರ ನಡುವೆಯೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಈ ಸಂಬಂಧ ಸಚುವ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಇದೆ ಮೊದಲೇನು ಅಲ್ಲ ಈ ಹಿಂದೆಯೂ ನೋಟಿಫಿಕೇಷನ್ ಆಗಿದೆ. ಅದು ಅವರು ಒಪ್ಪಿಕೊಂಡ ಮೇಲೆಯೇ ಆಗಿರೋದು. 500 ಎಕರೆ ಇದೆಯಲ್ಲ ಅವರು ಒಪ್ಪಿಕೊಂಡ ಮೇಲೆಯೇ ಹಿಂದೆ ನೋಟಿಫಿಕೇಷನ್ ಆಗಿರೋದು. ಆ ರೈತರು ಕೊಡುವುದಕ್ಕೆ ಬಹುಶಃ ಎಲ್ಲಾ ರೈತರು ರೆಡಿ ಇದ್ದಾರೆ. ಆ ರೈತರ ವಿಷಯ ಬೇರೆ ಈಗ. ಅದನ್ನು ಬಿಟ್ಟು ಹೋರಾಟ ಮಾಡ್ತಾ ಇರುವ ಬೇರೆಯದ್ದೇ ಇದೆ. ನಾಳೆ 15 ತಾರೀಖು ಮೀಟಿಂಗ್ ಇದೆ. ಮೀಟಿಂಗ್ ನಂತರ ಮುಖ್ಯಮಂತ್ರಿಗಳು ಅವರಿಗೆ ಏನು ಹೇಳಬೇಕು ಅದನ್ನ ಹೇಳ್ತಾರೆ.

 

ಅವರ ಹೋರಾಟ ಏನು ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಉಳಿಯಬೇಕು ಎಂಬುದು. ನಾವೂ ಸಹ ಅದಕ್ಕೆ ಒಳ್ಳೆಯ ರೇಟನ್ನೇ ಕೊಡ್ತೇವೆ. ಅನುಕೂಲ ಮಾಡಿ ಕೊಡ್ತೇವೆ. ಇಷ್ಟಾದ ಮೇಲೂ ಅವರು ಕೊಡಲ್ಲ ಅಂದ್ರೆ ಬಳಿಕ ಮುಖ್ಯಮಂತ್ರಿಗಳರೆ ಮಾತಾಡ್ತಾರೆ ಎಂದು ಭೂಸ್ವಾಧೀನದ ಬಗ್ಗೆ ಎಂಬಿ ಪಾಟೀಲ್ ಮಾತನಾಡಿದ್ದಾರೆ. ಒಂದು ಕಡೆ ಭೂಮಿ ಕೊಡಲ್ಲ ಎನ್ನುವ ರೈತರು ಇನ್ನೊಂದು ಕಡೆ ಕೊಡ್ತೀವಿ ಎಂಬ ರೈತರು. ಇದರಿಂದಾನೇ ಅರ್ಧ ಗೊಂದಲ ಮನೆ ಮಾಡಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment