ಚಿಕ್ಕಮಗಳೂರು: ಶಾಲೆಗಳಿಗೆಲ್ಲಾ ವಿವೇಕ ಯೋಜನೆಯಡಿ ಕೇಸರಿ ಬಣ್ಣ ಬಳಿಯುತ್ತಿರುವುದಕ್ಕೆ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಸಿಟಿ ರವಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದು, ಕೇಸರಿ ಅಲೆ ಮೇಲೆ ರಾಜಕೀಯ ಮಾಡುತ್ತೇವೆ. ಧಮ್ಮಿದ್ದರೆ ತಡೆಯಿರಿ ನೋಡೋಣಾ ಎಂದು ಚಾಲೆಂಜ್ ಹಾಕಿದ್ದಾರೆ.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿಯೇ ಬರಲಿದೆ. ಕೇಸರಿ ಶಾಲು ಕಂಡರೆ ಹಲವರು ಉರಿದು ಬೀಳುತ್ತಾರೆ. ಕುಂಕುಮವನ್ನು ದ್ವೇಷಿಸುವವರಿಗೆ ವೋಟು ಹಾಕಬೇಡಿ. ಕೇಸೆಇ ಕಂಡರೆ ಆಗದವರನ್ನು ಊರಿಗೆ ಬಿಟ್ಟುಕೊಳ್ಳಬೇಡಿ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ಒಬ್ಬೊಬ್ಬರು 10 ವೋಟು ಹಾಕಿಸಿ. ಆಗ ತರಿಕೆರೆಯಲ್ಲಿ 25 ಸಾವಿರ ಲೀಡ್ ನಲ್ಲಿ ಬರಬಹುದು ಎಂದಿದ್ದಾರೆ.
ಇನ್ನು ಟಿಪ್ಪು ಬಗ್ಗೆ ಮಾತನಾಡಿ, ಟಿಪ್ಪು ಸುಲ್ತಾನ್ ಏನು ಮಾಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು. ಎಪಿಜೆ ಅಬ್ದುಲ್ ಕಲಾಂ ಅವರ ಪ್ರತಿಮೆ ಅನಾವರಣ ಮಾಡಿದರೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಮಾಡಿದರೆ ಇಡೀ ರಾಜ್ಯದ ಜನತೆ ಖುಷಿ ವ್ಯಕ್ತಪಡಿಸುತ್ತಾರೆ ಎಂದಿದ್ದಾರೆ.