ಬೆಂಗಳೂರು: ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಬಗ್ಗೆ ಶಾಸಕ ರಾಜೂಗೌಡ ಖುಷಿಯಾಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 77 ವರ್ಷದ ಬಳಿಕ ಮೀಸಲಾತಿ ಹೆಚ್ಚಿಸಿದ ಗಂಡುಗಲಿ ಬೊಮ್ಮಾಯಿ ಅವರು ಎಂದು ಹಾಡಿ ಹೊಗಳಿದ್ದಾರೆ.
ವಾಲ್ಮೀಕಿ ಜಯಂತಿ ಆಚರಣೆಯ ಅಂಗವಾಗಿ ಮಾತನಾಡಿದ ರಾಜೂ ಗೌಡ, ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದು, ಜೀವನದಲ್ಲಿ ಮರೆಯಾಗದ ದಿನ. ಇಂತಹ ಕೆಲಸ ಆಗಬೇಕು ಎಂದರೆ ಎರಡು ಗುಂಡಿಗೆ ಬೇಕು. ಆ ಗುಂಡಿಗೆ ಬಸಪ್ಪಣ್ಣನಿಗೆ ಇದೆ. ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡು ಜೇನನ್ನು ನಮಗೆ ತಿನ್ನಿಸುವ ಕೆಲಸ ಮಾಡಿದ್ದಾರೆ. ನಾವೂ ಕೊನೆಯವರೆಗೂ ನಿಮ್ಮ ಗುಲಾಮರಾಗಿ ಇರುತ್ತೀವಿ. ಭಾರತೀಯ ಜನತಾ ಪರ ನಿಲ್ಲುತ್ತೇವೆ.
ಬೇಡ ಇಟ್ಟ ಗುರಿ ತಪ್ಪಲ್ಲ. ಮುಂದೆ ನಮ್ಮ ಜನ ನಿಮ್ಮ ಜೊತೆಗೆ ಇರುತ್ತಾರೆ. ಯಡಿಯೂರಪ್ಪ ಸಿಎಂ ಆಗದೆ ಇದ್ದರೆ ಸಮಿತಿ ಮುಂದುವರೆಯುತ್ತಿರಲಿಲ್ಲ. ಬೊಮ್ಮಾಯಿ ಅವರು ಸಿಎಂ ಆಗದೆ ಇದ್ದಿದ್ದರೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.