ನಾವೂ ಜೈಲಿಗೆ ಹೋಗಿದ್ದೀವಿ, ಹೀಗೆ ಹೆದರಿ ಓಡಿ ಹೋಗಿಲ್ಲ : ಸಿ ಟಿ ರವಿ

1 Min Read

ಚಿಕ್ಕಮಗಳೂರು: ನಿನ್ನೆ ರಾಹುಲ್ ಗಾಂಧಿಗೆ ಇಡಿ ನೀಡಿದ್ದ ಸಮನ್ಸ್ ಬಗ್ಗೆ ಖಂಡಿಸಿ, ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು, ಪಾದಯಾತ್ರೆ ಮೂಲಕ ರಾಹುಲ್ ಗಾಂಧಿಯನ್ನು ಕರೆತಂದರು. ಈ ವೇಳೆ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದ್ರೆ ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಪೊಲೀಸರಿಂದ ತಪ್ಪಿಸಿಕೊಂಡು ಓಡಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಈ ವಿಚಾರ ಸಂಬಂಧ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ವ್ಯಂಗ್ಯವಾಡಿದ್ದಾರೆ.

ಭವಿಷ್ಯವಿರುವುದು ರಾಜಕಾರಣದಲ್ಲಿ ಅಲ್ಲ ರನ್ನಿಂಗ್ ರೇಸ್ ನಲ್ಲಿ. ನಾನು ನೋಡಿದೆ. ಕ್ಷಣಮಾತ್ರದಲ್ಲಿ ಮಿಂಚಿನ ಓಟ. ಬಹುಶಃ ಅಥ್ಲೆಟಿಕ್ ಹೋದ್ರೆ ಅಲ್ಲಿ ಓಟದ ಆಟ ತೋರಿಸಬಹುದು. ಕಡೂರು ಗಿರೀಶ್ ಅವರು ಹೇಳೊದ್ದನ್ನು ನೆನಪು ಮಾಡಿದೆ. ನಾವೂ ಕೂಡ ಚಳುವಳಿ ಮೂಲಕ ಬಂದವರು. ಹತ್ತಾರು ಪೊಲೀಸ್ ಸ್ಟೇಷನ್ ನಲ್ಲಿ ಒದೆ ತಿಂದಿದ್ದೀವಿ. ನಮಗೇನು ಸಂಕೋಚವಿಲ್ಲ. ಚಳುವಳಿ ಮಾಡಿ. ವರ್ಷಕ್ಕೆ ಎರಡೂ ಮೂರುಮೂರು ಸಲ ಜೈಲಿಗೆ ಹೋಗಿದ್ದೀವಿ. ಯಾವತ್ತು ಕೂಡ ಬೆನ್ನು ತೋರಿಸಿ ಹೋಗಿಲ್ಲ.

ಅವರಿಗೆ ಏನು ವಯಸ್ಸು ಎಂಬುದು ಗೊತ್ತಿಲ್ಲ. ಪರವಾವಿಲ್ಲ ಓಟದಲ್ಲಿ ಭವಿಷ್ಯ ಕಂಡುಕೊಳ್ಳಬಹುದು. ಪೊಲೀಸರಿಂದ ತಪ್ಪಿಸಿಕೊಳ್ಳುವ ಕಳ್ಳರಿಗೆ ಇವರು ಮಾದರಿಯಾಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *