Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮಲ್ಲಿಯೂ ಶೂಟೌಟ್ ಮಾಡುವ ಕಾನೂನು ಇರಬೇಕಿತ್ತು : ಕೆ ಎನ್ ರಾಜಣ್ಣ ಹೀಗಂದಿದ್ಯಾಕೆ..?

---Advertisement---

ತುಮಕೂರು: ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿರುವ ಹೇಳಿಕೆಯೊಂದರ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿದೆ. ಆ ವಿಡಿಯೋದಲ್ಲಿ ಕೆ ಎನ್ ರಾಜಣ್ಣ, ವಿದೇಶದಲ್ಲಿ ಮಾಡಿದಂತೆ ನಮ್ಮಲ್ಲಿಯೂ ಶೌಟೌಟ್ ಮಾಡುವ ಕಾನೂನು ಇರಬೇಕಿತ್ತು ಎಂದಿದ್ದಾರೆ.

ಯಾರೇ ಆದರೂ ಸಮಾಜಘಾತುಕ ಕೃತ್ಯ ಎಸಗಿದರೆ ಅಂತವರನ್ನು ಖಂಡನೆ ಮಾಡಬೇಕು. ನಾನೇ ಮಾಡಲಿ ಅಥವಾ ಇನ್ನೊಬ್ಬರು ಮಾಡಲಿ ಅಂತವರನ್ನು ವಿರೋಧ ಮಾಡಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿ ಇದ್ದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ. ಶಾಂತಿಯ ವಾತಾವರಣವನ್ನು ಕದಡುವಂತೆ ಯಾರೇ ಮಾಡಿದರೂ ಕೂಡ ವಿದೇಶದಲ್ಲಿ ಮಾಡಿದಂತೆ ನಮ್ಮಲ್ಲೂ ಶೂಟೌಟ್ ಮಾಡುವಂತಹ ಕಾನೂನು ಬಂದರೆ ಒಳ್ಳೆಯದು ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಮಾತನಾಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಈ ವಿಡಿಯೋವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. ‘ದೇಶ ದ್ರೋಹಿ ಆಪ್ತರನ್ನು ಹೊಂದಿರುವ ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್ ಯಾವುದೇ ಕಾರಣಕ್ಕೂ ಪ್ರಮಾಣ ವಚನ ಸ್ವೀಕರಿಸಬಾರದೆಂದು ಕಾಂಗ್ರೆಸ್ ಪಕ್ಷದ ನಾಯಕರಾದ ಸಹಕಾರ ಸಚಿವ @KNRajanna_Off ಆಗ್ರಹಿಸುತ್ತಿದ್ದಾರೆ. ಆದರೆ, @INCKarnataka ದ ಪಾ’ಕೈ’ಸ್ತಾನ್‌ ಸರ್ಕಾರ ಮಾತ್ರ ನಾಸೀರ್‌ ಸಾಬ್‌ ಜಿಂದಾಬಾದ್‌ ಎನ್ನುತ್ತಿದೆ. FSL ವರದಿಯಲ್ಲಿ ಘೋಷಣೆ ದೃಢವಾಗಿದ್ದರೂ ಮಜಾವಾದಿ @siddaramaiah ಸರ್ಕಾರ ಬ್ರದರ್ಸ್ ಕಾಪಾಡಿಕೊಳ್ಳುವ ಕುತಂತ್ರದಲ್ಲೇ ಕಾಲ ಕಳೆಯುತ್ತಿದೆ. @INCIndia ಗೆ ಸ್ವಲ್ವವಾದರೂ ದೇಶಾಭಿಮಾನ, ಸ್ವಾಭಿಮಾನ, ಮರ್ಯಾದೆ ಇದ್ದರೆ, ಕೂಡಲೇ ನಾಸೀರ್‌ ಹುಸೇನ್‌ ಅವರಿಂದ ರಾಜೀನಾಮೆ ಪಡೆದು ನಾವು ದೇಶ ದ್ರೋಹಿಗಳ ವಿರುದ್ಧ ನಿಂತಿದ್ದೇವೆ ಎಂದು ತೋರಿಸಬೇಕು’ ಎಂದು ಟ್ವೀಟ್ ಮಾಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment