ನಾವೆಲ್ಲರೂ ಸ್ನೇಹ, ಸೌಹಾರ್ದತೆ, ಸಹಬಾಳ್ವೆಯಿಂದ ಬದುಕಬೇಕು : ಡಾ.ಜ್ಞಾನಪ್ರಕಾಶ್

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 24 : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲಾ ಹೇಗೆ ಬದುಕಬೇಕು. ಯಾವ ರೀತಿ ವ್ಯವಹರಿಸಬೇಕೆನ್ನುವ ಅರಿವು ಎಲ್ಲರಲ್ಲಿಯೂ ಇರಬೇಕೆಂದು ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಜ್ಞಾನಪ್ರಕಾಶ್ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಸಮಾಜದಲ್ಲಿ ನಾವ್ಯಾರು ಬಂಧುಗಳು, ನೆಂಟರಿಷ್ಟರಲ್ಲ. ಎಲ್ಲರೂ ಮನುಷ್ಯರು. ಪರಸ್ಪರರು ಸ್ನೇಹ, ಸೌಹಾರ್ಧತೆ, ಸಹಬಾಳ್ವೆಯಿಂದ ಬದುಕುವುದನ್ನು ಕಲಿತಾಗ ಜೀವನದಲ್ಲಿ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಚಲನೆ, ಸಂಚಲನೆ ಇದೇ ಮನುಷ್ಯನ ಅರಿವಿನ ಮುಖ್ಯ ಲಕ್ಷಣ. ಮತ್ತೊಬ್ಬರನ್ನು ಮೆಚ್ಚಿಸಿ ಖುಷಿ ಪಡುವುದು ಮನುಷ್ಯತ್ವವಲ್ಲ ಎಂದು ಹೇಳಿದರು.

ಲಕ್ಷ್ಮಿಕಾಂತ್, ಜ್ಯೋತಿ, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಬೂದಿ ಪಾಪಯ್ಯ, ಫೈಲ್ವಾನ್ ಮಲ್ಲಿಕಾರ್ಜುನ, ಬಿ.ಕೃಷ್ಣಪ್ಪ, ಪುಷ್ಪವತಿ, ವಿನೋಧಮ್ಮ,ಲತಾ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *