ಮೈಸೂರು: ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮೂಲಕ ದಸರಾಗೆ ಚಾಲನೆ ನೀಡಿದ ಬಳಿಕ ನಾದಬ್ರಹ್ಮ ಹಂಸಲೇಖ ಅವರು ಮಾತನಾಡಿದ್ದಾರೆ. ಈ ವೇಳೆ ಕನ್ನಡದ ಅಳಿವು ಉಳಿವಿನ ಬಗ್ಗೆ ಮಾತನಾಡಿದ್ದಾರೆ. ಕನ್ನಡದ ಕಂಪಿನ ಘಮಲಿನ ಬಗ್ಗೆ ಸಲಹೆ ನೀಡಿದ್ದಾರೆ.
ಕನ್ನಡ ನಮ್ಮ ಶೃತಿಯಾಗಬೇಕು. ಅದರ ಅಭಿವೃದ್ಧಿ ನಮ್ಮ ಕೃತಿಯಾಗಬೇಕು. ನಮ್ಮ ಕಾವೇರಿಗೆ ಒಂದು ಮಿತಿಯಿದೆ. ಕನ್ನಡ ಭಾಷೆಗೂ ಒಂದು ಮಿತಿ ಇದೆ. ಆದರೆ ಅದರ ಭಾವಕ್ಕೆ ಎಲ್ಲಿ ಎಲ್ಲೆಯಿದೆ. ನಮಗೆ ದೆಹಲಿ ಬೇಕು. ದೆಹಲಿಗೂ ನಾವೂ ಬೇಕು. ದೆಹಲಿಗೆ ಯಾಕೋ ಕನ್ನಡ ಬೇಡ ಅನ್ನಿಸುತ್ತಿದೆ. ಅದರ ಚಿಂತೆ ಈಗ ಬೇಡ. ಕನ್ನಡವನ್ನು ನಾವೂ ಪ್ರಪಂಚದ ವೇದಿಕೆಯಲ್ಲಿ ಕನ್ನಡವನ್ನು ಪರಿಚಯ ಮಾಡಿದರೆ ಅದು ನಮಗೆ ಹೆಮ್ಮೆ ಎನಿಸುತ್ತದೆ ಎಂದಿದ್ದಾರೆ.
ಕರ್ನಾಟಕದಲ್ಲಿ ವಾಸ ಮಾಡುವ ಎಲ್ಲರೂ ಕನ್ನಡಿಗರೇ. ಹೀಗಾಗಿ ಯಾರಿಗೆ ಕನ್ನಡ ಬರಲ್ಲ ಎಂಬುದು ಸಮೀಕ್ಷೆಯಾಗಬೇಕು. ಸರ್ಕಾರ ಹಾಗೂ ಸಾರ್ವಜನಿಕರು ಇದಕ್ಕೆ ಒತ್ತಾಸೆ ಮಾಡಬೇಕು. ಕನ್ನಡ ಕಲಿಯಲು ಆಸಕ್ತಿ ಇರುವವರು 30 ದಿನದಲ್ಲಿ ಕನ್ನಡ ಕಲಿಯುವಂತ ಕಾರ್ಯಗಾರ ಜಾರಿ ಮಾಡಬೇಕು ಎಂದಿದ್ದಾರೆ.