ಬೆಂಗಳೂರು: ನಟ ದರ್ಶನ್ ಗೆ ಜೈಲಿನಲ್ಲಿ ಸಣ್ಣ ಮೂಲಭೂತ ಸೌಲಭ್ಯವನ್ನು ಕೊಟ್ಟಿಲ್ಲ ಎಂಬ ಆರೋಪವನ್ನು ದರ್ಶನ್ ಪರ ವಕೀಲರು ಮಾಡಿದ್ದರು. ಹಾಸಿಗೆ, ದಿಂಬಾದ್ರು ನೀಡಿ ಅಂತ ಮನವಿ ಮಾಡಿದ್ದರು. ನ್ಯಾಯಾಧೀಶರ ಮುಂದೆ ನಿಂತಾಗ ದರ್ಶನ್ ಕೂಡ ಬೇಡಿಕೊಂಡಿದ್ದರು. ವಿಷ ಕೊಟ್ಟು ಬಿಡಿ ಅಂದಿದ್ದರು. ಅದಕ್ಕೆ ಸಮಾಧಾನದ ಮಾತುಗಳನ್ನ ಹೇಳಿದ ನ್ಯಾಯಾಧೀಶರು, ಮೂಲಭೂತ ಸೌಕರ್ಯ ನೀಡುವುದಕ್ಕೆ ಸೂಚನೆ ನೀಡಿದ್ದರು. ಆದರೂ ಯಾವುದೇ ಸೌಲಭ್ಯ ಕೊಟ್ಟಿಲ್ಲ ಅಂತ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಇಂದು ಮತ್ತೆ ಅರ್ಜಿ ವಿಚಾರಣೆಗೆ ಬಂದಿದ್ದು, ಜೈಲಿನ ಅಧಿಕಾರಿಗಳು ನಾವು ಎಲ್ಲಾ ರೀತಿಯ ಸೌಲಭ್ಯ ಕೊಟ್ಟಿದ್ದೇವೆ ಎಂದಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಅಷ್ಟು ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಿದ್ದರು. ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿದ್ದು, ಪೊಲೀಸರು ಈಗಾಗಲೇ ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಸಿರುವುದರಿಂದ ಕೋರ್ಟ್ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಬೇಕೆಂದು ಮನವಿ ಮಾಡಿಕೊಂಡರು. ಆದರೆ ಇಂದಿನ ವುಚಾರಣೆಗೆ ಕಾರ್ತಿಕ್ ಹಾಗೂ ಮತ್ತೊಬ್ಬ ಆರೋಪಿ ಗೈರಾಗಿದ್ದರು.
ಕೈ ಎತ್ತಿ ಮಾತನಾಡಲು ಅವಕಾಶ ಕೇಳಿದ್ದರು. ಆಗ ಮಾತನಾಡಿದ್ದ ನಟ ದರ್ಶನ್, ನನಗೆ ಜೈಲಿನಲ್ಲಿ ಸ್ವಲ್ಪ ಪಾಯಿಸನ್ ಕೊಡಿ ಸ್ವಾಮಿ ಎಂದು ಜಡ್ಜ್ ಗೆ ಮನವಿ ಮಾಡಿಕೊಂಡಿದ್ದರು. ಆದರೆ ಇಂದು ಮಾತನಾಡಲು ತನ್ನ ಕಷ್ಟ ಹೇಳಿಕೊಳ್ಳಲು ನಟ ದರ್ಶನ್ ಮುಂದಾಗಲಿಲ್ಲ. ಹಾಸಿಗೆ, ದಿಂಬು ಕೊಡುತ್ತಿಲ್ಲ ಎಂದು ದರ್ಶನ್ 2ನೇ ಭಾರಿ ಸಲ್ಲಿಸಿರುವ ಅರ್ಜಿಯ ಆದೇಶವನ್ನು ಕೋರ್ಟ್ ಈಗಾಗಲೇ ಕಾಯ್ದಿರಿಸಿದೆ.



