ಪಾಕಿಸ್ತಾನ ತನ್ನ ಪಾಠವನ್ನು ಕಲಿತಿದೆ : ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್

ಅಬುಧಾಬಿ : ಕಾಶ್ಮೀರದಂತಹ ಜ್ವಲಂತ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕರೆ ನೀಡಿದ್ದಾರೆ.

ದುಬೈ ಮೂಲದ ಅಲ್ ಅರೇಬಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ, ಭಾರತದೊಂದಿಗೆ ಮೂರು ಯುದ್ಧಗಳ ನಂತರ ಪಾಕಿಸ್ತಾನ ಪಾಠವನ್ನು ಕಲಿತಿದೆ ಮತ್ತು ಈಗ ಅದು ತನ್ನ ನೆರೆಹೊರೆಯ ದೇಶಗಳೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ಹೇಳಿದರು.

“ಭಾರತೀಯ ನಾಯಕತ್ವ ಮತ್ತು ಪ್ರಧಾನಿ ಮೋದಿಗೆ ನನ್ನ ಸಂದೇಶವೆಂದರೆ ಕಾಶ್ಮೀರದಂತಹ ನಮ್ಮ ಜ್ವಲಂತ ಸಮಸ್ಯೆಗಳ ಪರಿಹರಿಸಲು ಪರಸ್ಪರ ಜಗಳವಾಡುವುದನ್ನು ಬಿಟ್ಟು ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡದೆ ಶಾಂತಿಯುತವಾಗಿ ಬದುಕುವುದು ಮತ್ತು ಪ್ರಗತಿ ಸಾಧಿಸಲು ‌
ಕುಳಿತು ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆ ನಡೆಸೋಣ ಎಂದು ಶೆಹಬಾಜ್ ಷರೀಫ್ ಹೇಳಿದರು.

ದುಬೈ ಮೂಲದ ಅರೇಬಿಕ್ ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಪ್ರಧಾನಿ, “ನಾವು ಭಾರತದ ವಿರುದ್ಧ ಮೂರು ಯುದ್ಧಗಳನ್ನು ಮಾಡಿದ್ದೇವೆ. ಇದರಿಂದಾಗಿ ಜನರಿಗೆ ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗ ತಲೆದೋರಿದೆ ಎಂದು ಹೇಳಿದರು.

ನಾವು ನಮ್ಮ ಪಾಠವನ್ನು ಕಲಿತಿದ್ದೇವೆ ಮತ್ತು ನಾವು ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾದರೆ ನಾವು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ” ಎಂದು ಸೋಮವಾರ ಪ್ರಸಾರವಾದ ಸಂದರ್ಶನದಲ್ಲಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಪಾಕಿಸ್ತಾನ, ಆಹಾರ ಬಿಕ್ಕಟ್ಟು ಮತ್ತು ಇಂಧನ ಕೊರತೆಯಿಂದಾಗಿ ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶವನ್ನು  ಎದುರಿಸುತ್ತಿದೆ. ನಿಷೇಧಿತ ಸಂಘಟನೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಯಿಂದ ಭಯೋತ್ಪಾದಕ ದಾಳಿಗಳ ಹೆಚ್ಚುತ್ತಿವೆ.

ಶೆಹಬಾಜ್ ಷರೀಫ್ ಅವರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿ, “ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ. ಎರಡೂ ರಾಷ್ಟ್ರಗಳು ಬೆಳೆಯಲು ಮತ್ತು ಕಾಶ್ಮೀರದಲ್ಲಿ ಶಾಂತಿಯನ್ನು ತರಲು ನಾವು ಬಯಸುತ್ತೇವೆ ಎಂದರು.

ಪಾಕಿಸ್ತಾನವು ಬಾಂಬ್‌ಗಳು ಮತ್ತು ಮದ್ದುಗುಂಡುಗಳ ಮೇಲೆ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ನಾವು ಪರಮಾಣು ಶಕ್ತಿಗಳು, ಶಸ್ತ್ರಸಜ್ಜಿತರಾಗಿದ್ದೇವೆ. ಒಂದು ವೇಳೆ ಯುದ್ಧವು ಪ್ರಾರಂಭವಾದರೆ, ಯುದ್ದದ ನಂತರ ಏನಾಯಿತು ಎಂದು ಹೇಳಲು ಯಾರು ಬದುಕುತ್ತಾರೆ?” ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *