ಬೆಂಗಳೂರು: ಇಂದು ಪರಿಷತ್ ನಲ್ಲಿ ಕಾಂಗ್ರೆಸ್ ನಾಯಕರು ಮೇಮೆದಾಟು ಯೋಜನೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಕೇಂದ್ರ ಸರ್ಕಾರ ಡಿಪಿಆರ್ ಒಪ್ಪಿಕೊಳ್ಳುವಂತೆ ನಿರ್ಣಯ ಮಂಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದು, ನೆಲ, ಜಲ ಅಂತ ಬಂದರೆ ನಾವೂ ಒಂದೇ ಎಂದಿದ್ದಾರೆ.
ಮೇಕೆದಾಟು ಬಗ್ಗೆ ಸದನದಲ್ಲಿ ಅನೇಕ ಬಾರಿ ಚರ್ಚೆಯಾಗಿದೆ. ನಾವು ತಮಿಳುನಾಡಿನ ಮುಲಾಜಿನಲ್ಲಿ ಇಲ್ಲ. ನಾವೂ ನೆಲ, ಜಲ, ಭಾಷೆ, ಗಡಿ ವಿಚಾರದಲ್ಲಿ ಒಗ್ಗಟ್ಟಿನಲ್ಲಿ ಇರ್ತೇವೆ. ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಮ್ಮ ನಿರ್ಧಾರ ಸ್ಪಷ್ಟ ಮಾಡಿದ್ದೇವೆ. ಈ ಸಂಬಂಧ ಸರ್ವಪಕ್ಷ ಸಭೆಯಲ್ಲೂ ಚರ್ಚೆಯಾಗಿದೆ.
ತಮಿಳುನಾಡು ನಿರ್ಣಯದಿಂದ ನಮ್ಮ ಹಕ್ಕುಚ್ಯುತಿಯಾಗಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಕೇಂದ್ರ ಮತ್ತು ಪರಿಸರ ಇಲಾಖೆ ಯೋಜನೆಗೆ ಅನುಮತಿ ಕೊಡಲಿ. ಸಿಎಂ ಸಾಧ್ಯವಾದರೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿ. ಸಿಎಂ ಅವರು ಕೇಂದ್ರದ ಸಚಿವರ ಜೊತೆಗೂ ಚರ್ಚೆ ಮಾಡಲಿ. ಆದಷ್ಟು ಬೇಗ ಪರಿಸರ ಇಲಾಖೆ ಇದಕ್ಕೆ ಅನುಮತಿ ನೀಡಲಿ. ಸಿಎಂ ಪರಿಸರ ಇಲಾಖೆಯ ಅನುಮತಿ ಪಡೆದು ಬರಬೇಕು ಎಂದಿದ್ದಾರೆ.