ಚಿತ್ರದುರ್ಗ: ಜಿಲ್ಲೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಶ್ರೀರಾಮುಲು ಹಲವು ಯೋಜನೆಗಳಿಗೆ ಚಾಲನೆ ನೀಡಿದರು. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು, ಸಂಸ್ಕಾರದ ಬಗ್ಗೆ ಮಾತಾಡಿದವರಿಗೆ ತಿರುಗೇಟು ನೀಡಿದರು.
ಮೊಳಕಾಲ್ಮೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಇಂದು ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಟೀಕೆ ಮಾಡುವ ಟೀಕೆ ಮಾಡಬೇಕು. ನಮಗೂ ಬಾಯಿ ಇದೆ. ನಾವು
ನೂರಾರು ಮಾತನಾಡುತ್ತೇವೆ. ಆದರೆ ಅದು ನಮ್ಮ ಸಂಸ್ಕಾರ ಅಲ್ಲ ಎಂದರು. ನಾವು ಸಂಸ್ಕಾರದಿಂದ ಬಂದಿರುವಂತವರು. ನಾವು ನಾಯಕ ಜನಾಂಗದಲ್ಲಿ ಹುಟ್ಟಿದ್ರು ನಮ್ಮ ತಾಯಿ ತಂದೆ ಸಂಸ್ಕಾರ ಕಲಿಸಿದ್ದಾರೆ. ಸಂಸ್ಕಾರದಲ್ಲಿ ಯಾವ ರೀತಿ ಬೆಳೆಯಬೇಕು ಎಂಬುದನ್ನು ಕಲಿಸಿ ಕೊಟ್ಟಿದ್ದಾರೆ.
ಇಂದು ಭಾರತೀಯ ಜನತಾ ಪಾರ್ಟಿಯಲ್ಲಿ ಶ್ರೀರಾಮುಲು ಎಂಬ ವ್ಯಕ್ತಿ ಎಲ್ಲಿ ಹೋಗಿ ಕೇಳಿದ್ರೂ ಪ್ರೀತಿ ಅಭಿಮಾನ ಗಳಿಸಿಕೊಂಡಿದ್ದೇನೆ ಎಂದರು. ಜಗಳೂರು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ನೋಡಿದ್ರಲ್ವಾ ರಾಮುಲು ವ್ಯಕ್ತಿ ಎಂತ ವ್ಯಕ್ತಿ ಎಂದು ಹೇಳಿದ್ದಾರೆ ಎಂಬುದನ್ನು ನೋಡಿದ್ದಿರಲ್ವಾ ಎಂದರು.






GIPHY App Key not set. Please check settings