ಮಂಗಳೂರು: ಈಶ್ವರಪ್ಪ ನೀಡಿದ ರಾಷ್ಟ್ರ ಧ್ವಜ ಹೇಳಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧಣಿ ನಡೆಸುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಹಿಜಾಬ್ ವಿವಾದ ನಡೆಯುತ್ತಲೇ ಇದೆ. ಇದೆಲ್ಲದರ ಬಗ್ಗೆ ಮಾತನಾಡಿರುವ ಸಚಿವ ಆರ್ ಅಶೋಕ್ ಕಾಂಗ್ರೆಸ್ ಮೇಲೆ ಗರಂ ಆಗಿದ್ದಾರೆ.
ಶಾಲೆಗಳಲ್ಲಿ ವಿದ್ಯೆಗೆ ಆದ್ಯತೆ ಕೊಡೊಬೇಕು ಅಂತಾನೇ ಎಲ್ಲರು ಇದ್ದಾರೆ. ಆದ್ರೆ ಇವ್ರು ಬೇಕು ಅಂತಿದ್ರೆ ಇದ್ರಿಂದೆ ಯಾವುದೋ ಕೈವಾಡವಿದೆ ಎಂದು ಗೊತ್ತಾಗುತ್ತೆ. ಹೀಗೆ ಸಮಸ್ಯೆ ಬಗೆ ಹರಿಸದೆ ಧರಣಿ ಕೂತರೆ ಹೇಗೆ. ನಮ್ಮ ಕಾರು, ಟಿಎ, ಡಿಎ ಎಲ್ಲವೂ ಜನರ ದುಡ್ಡುಇನಿಂದ ಸಿಕ್ತಾ ಇರೋದು. ಅವರ ಹಣದಲ್ಲಿ ನಾವೂ ಸಂಬಳ ತೆಗೆದುಕೊಳ್ತೇವೆ. ಹತ್ರತ್ರ ಎರಡು ಲಕ್ಷ ಸಂಬಳ ತೆಗೆದುಕೊಂಡು ಹೀಗೆ ಗೊರಕೆ ಹೊಡೆದ್ರೆ ಎಂದು ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಜನರುಗೆ ಕುಡಿಯೋ ನೀರಿದ್ಯಾ, ವಿದ್ಯಾಭ್ಯಾಸ ಇದ್ಯಾ
ಇದೆಲ್ಲದರ ಸಮಸ್ಯೆ ಬಗ್ಗೆ ಗಮನ ಸೆಳೆದು ವಿಪಕ್ಷ ನಾಯಕರು ಸರ್ಕಾರದ ಕಿವಿ ಹಿಂಡಬೇಕು. ಆದ್ರೆ ಈಗ ಇದೆಲ್ಲಾ ಉಲ್ಟಾ ಆಗಿದೆ. ಈಗ ನಾವೆ ಹೇಳಬೇಕಾಗಿದೆ. ನಮ್ಮನ್ನ ಕಿವಿ ಹಿಂಡಿ, ಅಭಿವೃದ್ಧಿ ಬಗ್ಗೆ ಕೇಳಿ ಅಂತಿದ್ದೀವಿ. ಅವರಿಗೆ ಈಗ ಸಿಕ್ಕಾಪಟ್ಟೆ ಖುಷಿಯಾಗಿದೆ. ಕಳೆದ ಎರಡು ದಿನದಿಂದ ಏನು ಕೆಲಸ ಇಲ್ಲ. ಅವರಿಗೆ ಹಾಸಿಗೆ ಕೊಟ್ಟಿರೋದು, ಊಟ ಎಲ್ಲಾ ಟ್ಯಾಕ್ಸ್ ಹಣವೇ. ಜನರ ತೆರಿಗೆ ಹಣದಲ್ಲಿ ನಾವೂ ಬದುಕ್ತಾ ಇದ್ದೀವಿ. ಆದ್ರೆ ಹಿಂಗೆ ಗೊರಕೆ ಹೊಡೆದುಕೊಂಡು ಬದುಕ್ತಾ ಇದ್ರೆ ಹೇಗೆ. ಆಡಳಿತ ಪಕ್ಷದಲ್ಲಿದ್ದುಕೊಂಡು ವಿಪಕ್ಷದವರ ಕಿವಿ ಹಿಂಡಬೇಕಾಗಿದೆ. ಗೊರಕೆ ಹೊಡೆಯೋದನ್ನ ನಿಲ್ಲಿಸಿ. ಮೊದಲು ಆಗಬೇಕಾದ ಕೆಲಸದ ಬಗ್ಗೆ ಮಾತನಾಡಿ ಎಂದಿದ್ದಾರೆ.