ಮುಸ್ಲಿಂ ಭಾಂಧವರ ಕೊಲೆಯನ್ನೂ ಖಂಡಿಸುತ್ತೇವೆ : ಡಿಕೆ ಶಿವಕುಮಾರ್

1 Min Read

ಚಿತ್ರದುರ್ಗ: ಮಂಗಳೂರು ಜಿಲ್ಲೆಯಲ್ಲಿ ಮೂರು ಕೊಲೆಗಳು ನಡೆದಿವೆ. ಈ ಕೊಲೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಚಿತ್ರದುರ್ಗದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮದು ಶಾಂತಿಯ ತೋಟ. ಬೇಧ ಭಾವ ಮಾಡಬಾರದು. ಮುಸ್ಲಿಂ ಭಾಂಧವರ ಕೊಲೆಯೂ ನಡೆದಿದೆ. ಅದನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಇದೇ ವೇಳೆ ಕಾರ್ಯಕರ್ತರ ಜೊತೆ ಪೂರ್ವಭಾವಿ ಸಭೆ ನಡೆಸಿದ್ದು, ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ದೇಶ ನಮ್ಮದು, ಸಂವಿಧಾನ ನಮ್ಮದು, ಈ ದೇಶ ನಮ್ಮದು ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಮಾಡಬೇಕು. ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಬಿಜೆಪಿಯವರೇನು ಇರಲಿಲ್ಲ ಎಂದಿದ್ದಾರೆ.

ಅವರು ಮನೆ ಮೇಲೆ ಬಾವುಟ ಹಾರಿಸುವ ಕರೆ ನೀಡಿದ್ದಾರೆ. ಆ ಮೊದಲೇ ನಾವು ಪಾದಯಾತ್ರೆ ಮಾಡಿ ಸಂಭ್ರಮಿಸಲು ಕರೆ ನೀಡಿದ್ದೇವೆ. ತ್ರಿವರ್ಣದ ಬಾವುಟ ನಾವು ನೀಡಿದ್ದು ಇದನ್ನು ಹಾಕಿಕೊಳ್ಳುವ ಅಧಿಕಾರಕ್ಕೆ ಕಾಂಗ್ರೆಸ್ಸಿಗರಿಗೆ ಇದೆ ಬಿಜೆಪಿಯವರಿಗೆ ಇಲ್ಲ. ಭಾರತ ಜೊಡೋ ಪಾದಯಾತ್ರೆಯು ನಿಮ್ಮ ಜಿಲ್ಲೆಯಲ್ಲಿ 80 ಕಿ.ಮೀ ಸಾಗಲಿದೆ. ಈ ಪಾದಯಾತ್ರೆ ಮೇಕೆದಾಟು ಪಾದಯಾತ್ರೆಗಿಂತ ಚನ್ನಾಗಿ ನಡೆಯಬೇಕು ಕಾಂಗ್ರೆಸ್ ಕಾರ್ಯಕರ್ತರಿಗೆ ಎಂದು ಕರೆ ನೀಡಿದರು.

ಸದರಿ ಪಾದಯಾತ್ರೆಯಲ್ಲಿ ಬಿಜೆಪಿ ಪಕ್ಷದ ವೈಪಲ್ಯಗಳನ್ನು ಭೀತ್ತಿಪತ್ರಗಳನ್ನು ಹಂಚಬೇಕು. ಆಗಸ್ಟ್-03 ರಂದು ಸಿದ್ದರಾಮಯ್ಯರವರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸುವ ಸಂಖ್ಯೆಯೂ ಸಹ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲೂ ಭಾಗವಹಿಸಬೇಕು. ಪಕ್ಷಾತೀತವಾಗಿ ಭಾಗವಹಿಸುವಂತೆ ಭಾಗವಹಿಸಲು ಮನವಲಿಕೆ ಮಾಡಬೇಕು. ಎಲ್ಲಾ ವರ್ಗದವರನ್ನು, ಎಲ್ಲಾ ಸಮಸ್ಯೆಗಳನ್ನು ಹೊತ್ತು ಈ ಪಾದಯಾತ್ರೆ ನಡೆಸೋಣ ಭಾರತವನ್ನು ಒಂದು ಮಾಡುವ ನಿಟ್ಟಿನಲ್ಲಿ ಶ್ರಮಿಸೋಣ ಎಂದರು. ರಾಹುಲ್ ಗಾಂಧಿಯವರು ಶ್ರೀ ಮಠಕ್ಕೆ ಭಾಗವಹಿಸುವ ಸಂದರ್ಭದಲ್ಲಿ ಭಾಗವಹಿಸುವ ಬಗ್ಗೆ ಚರ್ಚೆ ಮಾಡುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *