ಬೆಂಗಳೂರು, (ಜು.07) : ಅಯ್ಯಾ ಸಂಸ್ಕೃತಿ ಇರಲಿ, ಎಲವೋ ಸಂಸ್ಕೃತಿ ಬೇಡ. ಬಸವಣ್ಣನವರ ಈ ತತ್ವದ ಕೊಡುಗೆಯಿಂದ ಸ್ತ್ರೀಯರಿಗೆ ಸ್ಥಾನಮಾನ, ಸಮಾನತೆ, ಸಾಮಾಜಿಕ ನ್ಯಾಯ ಈ ನಾಡಿಗೆ ದೊರೆತಂತಾಗಿದೆ ಎಂದು ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಹೇಳಿದರು.
ವಿಜಯನಗರ ಬಸವ ಕೇಂದ್ರ ಆಯೋಜಿಸಿದ್ದ “ಶರಣ ಸಂಗಮ” ಹಾಗೂ ಕೆ ಎ ಎಸ್ ಮತ್ತು ಪಿ ಎಸ್ ಐ ಸ್ಪರ್ಧಾತ್ಮಕ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಲೀಲಾದೇವಿ ಆರ್ ಪ್ರಸಾದ್ ಮಾತನಾಡಿ, ಇಂದು ಜೀವನ ಕಲಿಸಿಕೊಡುವ ಯಾವೊಂದು ವಿಶ್ವವಿದ್ಯಾಲಯಗಳು ಇಲ್ಲ. ಮೊದಲು ಜೀವನ ನಡೆಸುವ ಪಾಠ ಕಲಿಯಿರಿ ಎಂದರು. ಇಂದು ಭ್ರಷ್ಟಾಚಾರ ತಾಂಡವಾಡುತ್ತಿದೆ. ಲಂಚ ಮುಕ್ತ ಸಮಾಜ ನಿರ್ಮಾಣ ಕಾರ್ಯ ನಡೆಯಬೇಕಿದೆ. ತಾನು ಈವರೆವಿಗೂ ಎಲ್ಲಿಯೂ ಜಮೀನು ಆಸ್ತಿ ಹೊಂದಿಲ್ಲ. ಕಾರಣ ಅಂದಿನ ರಾಜಕಾರಣದಲ್ಲಿ ಸಾಮಾಜಿಕ ಸೇವೆಗೆ ಜೀವನ ಮುಡುಪಾಗಿತ್ತಿದ್ದೇವು ಎಂದರು.
ಬಸವ ಕೇಂದ್ರದ ಅಧ್ಯಕ್ಷ ಡಿ ಟಿ ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಬಸವ ಕೇಂದ್ರ ಬಸವಣ್ಣನವರ ನಿಜಾಚರಣೆಗಳನ್ನು ನಾಡಿಗೆ ತಲುಪಿಸುವ ಕೆಲಸ ಮಾಡುತ್ತವೆ ಎಂದರು ಮೂಢನಂಬಿಕೆ ಬಿಡಿ ಕಾಯಕದಲ್ಲಿ ನಂಬಿಕೆ ಇಡೀ ಎಂದರು.
ಅಪ್ಪುಗೆರೆ ತಿಮ್ಮರಾಜ್, ಬೆಂಗಳೂರಿನ ತಹಶೀಲ್ದಾರ್ ಪ್ರಶಾಂತ್ ಗೌಡ ಪಾಟೀಲ್, ವೀರಭದ್ರ ಬ್ಯಾಡಗಿ, ಡಾ.ರಾಜು, ಹರಿಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು. ಸತೀಶ್ ಅಮೃತ್ ಕಾರ್ಯಕ್ರಮ ನಿರ್ವಹಿಸಿದರು .