ಬೆಂಗಳೂರು : ಸತತವಾಗಿ ಸುರಿದ ಮಳೆಯಿಂದಾಗಿ ಸಿಲಿಕಾನ್ ಸಿಟಿ ರಸ್ತೆಗಳೆಲ್ಲಾ ನದಿಯಂತಾಗಿ ಬದಲಾಗಿದೆ. ಎಷ್ಟೋ ಅಪಾರ್ಟ್ಮೆಂಟ್ ಗಳಿಗೆ ನೀರು ನುಗ್ಗಿದೆ. ಯಲಹಂಕದ ಕೋಗಿಲು ಕ್ರಾಸ್ ಬಳಿ ಇರುವ ಕೇಂದ್ರಿಯ ವಿಹಾರ್ ಅಪಾರ್ಟ್ ಮೆಂಟ್ ತುಂಬಾ ನೀರು ತುಂಬಿದೆ. ನಿನ್ನೆಯಿಂದ ಮಳೆ ಕೊಂಚ ತಗ್ಗಿದ್ದರು, ನಿಂತ ನೀರು ಕಡಿಮೆಯಾಗಿಲ್ಲ.
ಇಂದು ವಿಹಾರ್ ಅಪಾರ್ಟ್ಮೆಂಟ್ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪಾರ್ಟ್ಮೆಂಟ್ ಜನರ ಜೊತೆಗೆ ಒಂದಿಷ್ಟು ಮಾತನಾಡಿ, ಧೈರ್ಯ ತುಂಬಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಮನೆಗೆ ನೀರು ನುಗ್ಗಿದ್ರೆ 10 ಸಾವಿರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು ಪೂರ್ಣ ಪ್ರಮಾಣದಲ್ಲಿ ಮನೆ ಹಾಳಾಗಿದ್ರೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಇವತ್ತೇ 10 ಸಾವಿರ ರೂಪಾಯಿ ಪರಿಹಾರವನ್ನ ನೀಡುತ್ತೇವೆಂದು ಹೇಳಿದ್ದಾರೆ.
ಮಳೆಯಿಂದಾಗಿ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ 300- 400 ಮನೆಗಳಿಗೆ ನೀರು ನುಗ್ಗಿದೆ. 2-3 ಅಡಿ ನೀರು ನಿಂತಿದೆ. ಇದರಿಂದ ಮನೆಯಲ್ಲಿ ವಾಸ ಮಾಡೋದಕ್ಕೂ ಕಷ್ಟವಾಗ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅವರಿಂದ ಮಾಹಿತಿಪಡೆದಿದ್ದೇನೆ. ರಾಜಕಾಲುವೆ ಸಂಪೂರ್ಣ ದುರಸ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.