Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭದ್ರಾ ಯೋಜನೆಯಿಂದ ಹೊಸದುರ್ಗ ತಾಲ್ಲೂಕಿನ 1.33 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು : ಶಾಸಕ ಬಿ.ಜಿ. ಗೋವಿಂದಪ್ಪ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಸುದ್ದಿಒನ್. ನ.21: ಭದ್ರಾ ಜಲಾಶಯದಿಂದ ಹೊಸದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 400 ಕೋಟಿ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ವೇಗ ನೀಡಿ, ಕಾರ್ಯಗತಗೊಳಿಸಲಾಗುವುದು ಎಂದು ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.

ಮಂಗಳವಾರ ಹೊಸದುರ್ಗ ತಾಲ್ಲೂಕಿನ  ಅತ್ತಿಮಗ್ಗೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ  ಜನರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಭದ್ರಾ ಯೋಜನೆ ಅನುಷ್ಠಾನದಿಂದ ಹೊಸದುರ್ಗ ತಾಲ್ಲೂಕಿನ 1.33 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಉಣಿಸಲಾಗುವುದು. ರೂ.400 ಕೋಟಿ ವೆಚ್ಚದಲ್ಲಿ ಭದ್ರಾ ಜಲಾಶಯದಿಂದ  ಬಹುಗ್ರಾಮ ಯೋಜನೆಯಡಿ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ತ್ವರಿತವಾಗಿ ನಡೆಯುತ್ತಿದೆ. ಮಾರ್ಚ್ ವೇಳೆಗೆ ಮೊದಲ ಹಂತದಲ್ಲಿ ಹೊಸದುರ್ಗ ನಗರ, ಕಸಬಾ ಹಾಗೂ ಮಾಡದಕರೆ ಹೋಬಳಿ ಅರ್ಧ ಭಾಗದ  ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ನೀಡಲಾಗುವುದು. ಮುಂದಿನ ವರ್ಷದ ವೇಳೆಗೆ ಉಳಿದ ಭಾಗಗಳಿಗೂ ಶುದ್ಧ ಕುಡಿಯುವ ನೀರು ನೀಡಲಾಗುವುದು ಎಂದರು.

ಬಗರ್ ಹುಕುಂ ನಡಿ ಭೂಮಿ ಸಾಗುವಳಿ ದಾಖಲೆ ನೀಡುವಂತೆ ಈ ಭಾಗದ ಬಹಳಷ್ಟು ರೈತರು ಅರ್ಜಿ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿದೆ.  ಬಗರ್‍ಹುಕುಂ ಸಾಗುವಳಿ ಸಮಿತಿ ರಚನೆಗೆ ಈಗಾಗಲೆ ಸರ್ಕಾರಕ್ಕೆ ಪತ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸರ್ಕಾರ ಸಮಿತಿ ರಚನೆಗೆ ಅನುಮತಿ ನೀಡಲಿದೆ.  ಫಾರಂ 54 ಹಾಗೂ 57 ಅಡಿ ಸಾಗುವಳಿ ಜಮೀನು ಮಂಜೂರಾತಿಗೆ ಸಲ್ಲಿಸಿದ  ಅರ್ಜಿಗಳ ಆಧಾರದಲ್ಲಿ ಕಂದಾಯ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಜಮೀನಗಳ ಜಿ.ಪಿ.ಎಸ್ ಸರ್ವೇ ಮಾಡಿ ಸಾಗುವಳಿದಾರರ ವಿವರ ನಮೂದಿಸುವರು.

ಇದನ್ನು ಆಧರಿಸಿ ಬಗರ್ ಹುಕುಂ ಸಮಿತಿ ಸಭೆಯಲ್ಲಿ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು.  ವಿ.ವಿ. ಸಾಗರ ಜಲಾಶಯದ ಹಿನ್ನೀರಿನಿಂದ ತೊಂದರೆ ಅನುಭವಿಸುತ್ತಿರುವ ಈ ಭಾಗದ ರೈತರಿಗೇ ಮೊದಲು ಭೂಮಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಕಂದಾಯ ಸಚಿವರಾದ ಕೃಷ್ಣ ಭೈರೇಗೌಡವರು ತಾಂತ್ರಿಕ ಸಲಹೆ ಪಡೆದುಕೊಂಡು ಜಮೀನು ಹಂಚಿಕೆಗೆ ಕ್ರಮ ಕೈಗೊಂಡಿದ್ದಾರೆ. ಬಗರ್ ಹುಕುಂ ಅರ್ಜಿಗಳನ್ನು ಗಣಕೀಕರಣ ಮಾಡಿ ನೊಂದಾಯಿಸಲಾಗುವುದು. ಇದರಿಂದ ಅರ್ಜಿಗಳು ಕಳೆದು ಹೋಗುವ ಸಂಭವ ಎದುರಾಗುವುದಿಲ್ಲ. ಬಗರ್ ಹುಕುಂ ಸಮಿತಿಗೆ ಸರ್ಕಾರದಿಂದ ಅನುಮತಿ ಬಂದ ಬಳಿಕ, ತಹಶಿಲ್ದಾರರು ಕಾರ್ಯದರ್ಶಿಯಾಗಲಿದ್ದು ಪ್ರತಿ ವಾರ ತಪ್ಪದೇ ಸಭೆಗಳನ್ನು ನಡೆಸಿ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುವುದು.

ಬಗರ್ ಹುಕುಂ ಸಮಿತಿಗೆ ಸ್ಥಳೀಯ ಶಾಸಕರು ಅಧ್ಯಕ್ಷರಾಗಿದ್ದು ಅನುಮೋದಿಸಿದ ಅರ್ಜಿಗಳಿಗೆ ಬಯೋ ಮೆಟ್ರಿಕ್ ನೀಡಬೇಕಾಗುತ್ತದೆ. ಅರ್ಜಿದಾರರಿಗೆ ಆನ್ ಲೈನ್ ಮೂಲಕವೇ ಸಾಗುವಳಿ ಚೀಟಿ ಲಭಿಸಲಿದೆ.  ಫಾರಂ 53 ಅಡಿ ಅರ್ಜಿ ಸಲ್ಲಿಸಿದವರಿಗೆ ಸಾಗುವಳಿ ಚೀಟಿ ನೀಡಲಾಗುವುದು. ಸರ್ಕಾರ ಹಾಗೂ ಹೈಕೋರ್ಟ್ ಆದೇಶಗಳ ಅನುಸಾರ ಫಾರಂ 57 ಅಡಿ ಕ್ರಮಕೈಗೊಳ್ಳಲಾಗುವುದು. ಮಾರ್ಗಸೂಚಿಗಳ ಅನುಸಾರವೇ ಭೂಮಿ ಮುಂಜೂರು ಮಾಡಲಾಗುವುದು.

ರೈತರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬಾರದು. ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಹೊಸ ಮನೆಗಳಿಗೆ ಅರ್ಜಿ ಕರೆಯಲಾಗುವುದು. ಹೊಸ ಅರ್ಜಿಗಳನ್ನು ಗ್ರಾಮ ಸಭೆಯ ಮುಂದಿರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಸದ್ಯ ಈ ಹಿಂದೆ ಮಂಜೂರು ಆಗಿರುವ ಮನೆಗಳಿಗೆ ಸರ್ಕಾರ ಅನುದಾನದ ನೀಡಿದೆ. ಫಲಾನುಭವಿಗಳು ಶೀಘ್ರವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳಿಗೆ 15 ದಿನದಲ್ಲಿ ಮನೆ ಬಾಗಿಲಿಗೆ ಉತ್ತರ ಬರುತ್ತದೆ. ಯಾರೂ ಕೂಡ ಕಚೇರಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಆದಿ ಜಾಂಬವ, ಅಂಬೇಡ್ಕರ್, ದೇವರಾಜ ಅರಸು, ಉಪ್ಪಾರ ಸೇರಿದಂತೆ  ಎಲ್ಲಾ ನಿಗಮಮಂಡಳಿಗಳಲ್ಲಿ ಸಾಲ ಸೌಲಭ್ಯಕ್ಕೆ ಹಲವು ಜನರು ಅರ್ಜಿ ಸಲ್ಲಿಸಲಾಗಿದೆ. ನಿಗಮಗಳ ಸಾಲ ಮಂಜೂರಾತಿಗೆ ಗುರಿ ನಿಗದಿಯಾಗಿಲ್ಲ. ಗುರಿ ನಿಗದಿಯಾದ ಬಳಿಕ ಜೇಷ್ಠತೆ ಹಾಗೂ ಅರ್ಹತೆ ಆಧರಿಸಿ ಸಾಲ ಮಂಜೂರು ಮಾಡಲಾಗುವುದು. ವಿವಿಧ ನಿಗಮಗಳಡಿ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಸೇರಿದಂತೆ ಯಾವುದೇ ಯೋಜನೆಗಳಡಿ ಸಾಲ ಸೌಲಭ್ಯ ಹಾಗೂ ಸರ್ಕಾರದ ಸೌಲಭ್ಯಕ್ಕಾಗಿ ಯಾರೂ ಕೂಡ ಮಧ್ಯವರ್ತಿಗಳ ಹಾವಳಿಗೆ ಒಳಗಾಗಿ ಹಣ ಕಳೆದುಕೊಳ್ಳಬೇಡಿ, ಯೋಜನೆಗಳು ನೇರವಾಗಿ ಫಲಾನುಭವಿಗೆ ಮಂಜೂರು ಮಾಡಲಾಗುವುದು ಎಂದರು.

ಅತ್ತಿಮಗ್ಗೆ ಗ್ರಾ.ಪಂ. ಭಾಗದಲ್ಲಿ ಹಲವು ಗ್ರಾಮಗಳ ಜಮೀನು ವಿ.ವಿ. ಸಾಗರ ಹಿನ್ನೀರಿನಲ್ಲಿ  ಮುಳುಗಡೆಯಾಗಿವೆ. ಇವರಿಗೆ ಬೇರೆಡೆ ಸಾಗುವಳಿ ಜಮೀನು ನೀಡಲಾಗುವುದು. ಬರಗಾಲದ ಹಿನ್ನಲೆಯಲ್ಲಿ ಕೆರೆ ಮೀನುಗಳ ಪಾಶುವಾರು ಹಕ್ಕಿನ ಹರಾಜಿಗೆ ತಡೆ ನೀಡಿ, ಲೈಸೆನ್ಸ್ ಹೊಂದಿದ ಮೀನುಗಾರರಿಗೆ  ಮೀನು ಹಿಡಿಯಲು ಅವಕಾಶ ಮಾಡಿಕೊಡಲಾಗಿದೆ.  ವಿವಿ ಸಾಗರ ಕೋಡಿಯಲ್ಲಿ ಹೆಚ್ಚಿನ ನೀರು ಹರಿದು ಹೋಗದೆ ಅತ್ತಿ ಮಗ್ಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಮೀನು ಮುಳುಗಡೆಯಾಗುತ್ತಿತ್ತು. ಇದಕ್ಕೆ ಪರಿಹಾರ ಒದಗಿಸಲು ವೇದಾವತಿ ನದಿ ನೀರಿನ ಜೊತೆಗೆ ವಿ.ವಿ ಸಾಗರಕ್ಕೆ ಸೇರುವ ಇತರೆ ಹಳ್ಳಗಳ ನೀರಿನ ಅಳತೆಗೂ ಗೇಜಿಂಗ್ ಅಳವಡಿಸಲಾಗುವುದು. ಜಲಾಶಯ ಗರಿಷ್ಟ 130 ಅಡಿಗೆ ಮಾತ್ರ ನೀರು ನಿಲ್ಲುವಂತೆ ತಂತ್ರಜ್ಞಾನ ಅಳವಡಿಸಲಾಗುವುದು.

ಕಳೆದ ಬಾರಿ 25 ಸಾವಿರ ಎಕರೆಗೂ ಹೆಚ್ಚಿನ ಜಮೀನನಲ್ಲಿ ನೀರು ನಿಂತು ಅಪಾರ ಹಾನಿ ಸಂಭವಿಸಿತ್ತು. ವಿಶ್ವೇಶ್ವರಯ್ಯ ಜಲ ನಿಗಮದಿಂದ ಯೋಜನೆ ಡಿಪಿಆರ್ ಅನ್ನು ಜಲಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡುವರು ಎಂದರು.

ಕೋಡಿ ನೀರು ಹರಿದು ಹೋಗವ ಹಾದಿಯಲ್ಲಿ ರಸ್ತೆ ಮುಳುಗಡೆಗೊಂಡು ಸಂಪರ್ಕ ಕಡತ ತಪ್ಪಿಸಲು ರೂ.33 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಹೊಸದುರ್ಗ ತಾಲ್ಲೂಕು ಆಡಳಿತ ಹಾಗೂ ಪಂಚಾಯತಿಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ.  ಮುಂದಿನ ಮಂಗಳವಾರ ತಾಲ್ಲೂಕಿನ ಬಾಗೂರು ಗ್ರಾ.ಪಂ. ನಲ್ಲಿ ಜನತಾ ದರ್ಶನ ಏರ್ಪಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.  ಪ್ರ್ರಾಸ್ತಾವಿಕವಾಗಿ ಮಾತನಾಡಿ ಜನತಾ ದರ್ಶನ ಕಾರ್ಯಕ್ರಮದಲ್ಲಿ  ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳನ್ನು ಅಲಿಸಿ ಪರಿಹಾರ ನೀಡಲಾಗುವುದು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಇದುವರೆಗೂ ಜರುಗಿದ ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ಒಟ್ಟು 721 ಅರ್ಜಿಗಳು ಸ್ವೀಕರಿಸಲಾಗಿದ್ದು, ಈಗಾಗಲೆ 589 ಅರ್ಜಿಗಳನ್ನು ವಿಲೇ ಮಾಡಲಾಗಿದೆ.

ಉಳಿದ ಅರ್ಜಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಕಳೆದ ಅ. 30 ರಂದು ಹೊಸದುರ್ಗ ನಗರದಲ್ಲಿ ಜರುಗಿದ ಜನತಾ ದರ್ಶನದಲ್ಲಿ  262  ಅರ್ಜಿಗಳು ಸ್ವೀಕರಿಸಲಾಗಿದ್ದು, 20 ದಿನದಲ್ಲಿ 80 ಅರ್ಜಿಗಳು ವಿಲೆ ಮಾಡಲಾಗಿದೆ. ಉಳಿದ 182 ಅರ್ಜಿಗಳಿಗೆ  ಒಂದು ತಿಂಗಳ ಒಳಗಾಗಿ ಪರಿಹಾರ ನೀಡಲಾಗುವುದು ಎಂದರು.

ಜನತಾ ದರ್ಶನದ ಅಂಗವಾಗಿ ವಿವಿಧ ಇಲಾಖೆಗಳಿಂದ ಕೌಂಟರ್ ತೆರದು ಸ್ಥಳದಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಯಿತು. ಜನರು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಹವಾಲುಗಳನ್ನು ನಿವೇದಿಸಿಕೊಂಡರು. ಅತ್ತಿಮಗ್ಗೆ ಗ್ರಾಮದಲ್ಲಿ  ಪ್ರಭಾರಿ ಗ್ರಾಮ ಲೆಕ್ಕಾಧಿಕಾರಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದು, ಪೂರ್ಣಕಾಲಿಕ ಅಧಿಕಾರಿಗಳನ್ನು ನೇಮಿಸುವಂತೆ ಕೇಳಿಕೊಂಡರು.  ಅತ್ತಿಮಗ್ಗೆ-ಮುದ್ದೇನಟ್ಟಿ ಗ್ರಾಮದ ದಾರಿಯಲ್ಲಿ ಕಿರು ಸೇತುವೆ ನಿರ್ಮಿಸಿಕೊಡಲು ಮನವಿ ಮಾಡಿದರು.

ಮಾಡದಕೆರೆ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ತನಿಖೆ ನಡೆಸುವಂತೆ ಕೋರಿದರು.  ಅಲ್ಲದೆ ಗೃಹಲಕ್ಷ್ಮಿ ಯೋಜನೆಯಡಿ ಕೆಲವರು ಹಣ ಬಂದಿಲ್ಲ ಎಂದು ಅಹವಾಲು ಸಲ್ಲಿಸಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಅನುಸೂಯಮ್ಮ, ಜಿ.ಪಂ. ಯೋಜನಾ ನಿರ್ದೆಶಕ ರಂಗಸ್ವಾಮಿ, ತಾ.ಪಂ. ಇಓ ಸುನೀಲ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಹೊಸದುರ್ಗ ತಹಶೀಲ್ದಾರ್ ತಿರುಪತಿ ಪಾಟೀಲ್ ಸ್ವಾಗತಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

ಬದುಕಿನಲ್ಲಿ ರಂಗಭೂಮಿ ಉತ್ತಮ ಮಾರ್ಗದರ್ಶನ ನೀಡುತ್ತದೆ : ಡಾ.ಬಸವಕುಮಾರ ಸ್ವಾಮೀಜಿ

    ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22: ಜೀವನ ಒಂದು ನಾಟಕರಂಗ ನಾವುಗಳು ಅದರ ಪಾತ್ರಧಾರಿಗಳು. ಬದುಕಿನಲ್ಲಿ ನಾನಾ ಕಷ್ಟಸುಖಗಳು ಬರುತ್ತವೆ. ಅದಕ್ಕೆಲ್ಲಾ ಉತ್ತಮ ಮಾರ್ಗದರ್ಶನ ನೀಡುವುದು ರಂಗಭೂಮಿ ಮಾತ್ರ ಎಂದು ಎಸ್.ಜೆ.ಎಮ್. ವಿದ್ಯಾಪೀಠದ

error: Content is protected !!