Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

WATCH : ಕೇವಲ 15 ವರ್ಷಕ್ಕೆ ಬಿಸಿಸಿಐನಿಂದ ಟೀಂ ಇಂಡಿಯಾ ಜೆರ್ಸಿ ಪಡೆದುಕೊಂಡ ವೈಭವ್ ಸೂರ್ಯವಂಶಿ

---Advertisement---

ಮುಂಬೈ.ಜೂನ್.23: ಭಾರತೀಯ ಕ್ರಿಕೆಟ್ನ ಉದಯೋನ್ಮುಖ ತಾರೆ, ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಸಂಪೂರ್ಣ ಸಜ್ಜಾಗಿದ್ದಾರೆ. ಶುಕ್ರವಾರದಿಂದ ಐರ್ಲೆಂಡ್ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟಿ20 ಸರಣಿಯೊಂದಿಗೆ ಟೀಮ್ ಇಂಡಿಯಾದಲ್ಲಿ ‘ವೈಭವ್ ಸೂರ್ಯವಂಶಿ ಯುಗ’ ಆರಂಭವಾಗಲಿದೆ.

ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ವೈಭವ್ ಅವರಿಗೆ ಬಿಸಿಸಿಐ (BCCI) ಟೀಮ್ ಇಂಡಿಯಾದ ಅಧಿಕೃತ ಜೆರ್ಸಿಯನ್ನು ಹಸ್ತಾಂತರಿಸಿದ್ದು, ಇದಕ್ಕೆ ಸಂಬಂಧಿಸಿದ ವಿಶೇಷ ವಿಡಿಯೋವನ್ನು ತನ್ನ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.

ಟೀಮ್ ಇಂಡಿಯಾದ ಅಧಿಕೃತ ಕಿಟ್ ಮತ್ತು ಜೆರ್ಸಿಯನ್ನು ಸ್ವೀಕರಿಸುವಾಗ ವೈಭವ್ ತೀವ್ರ ಭಾವುಕರಾದರು. ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ (ರಘು) ಅವರು ಖುದ್ದಾಗಿ ಹೋಟೆಲ್ನಲ್ಲಿರುವ ವೈಭವ್ ಅವರ ಕೋಣೆಗೆ ಹೋಗಿ ಈ ಕಿಟ್ ಅನ್ನು ನೀಡಿದರು. ರೂಮ್ ಬೆಲ್ ಬಾರಿಸಿ ಒಳಗ ಬಂದ ರಘು ಅವರನ್ನು ನೋಡಿದ ತಕ್ಷಣ, ವೈಭವ್ ಅತ್ಯಂತ ಗೌರವದಿಂದ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು.

ಜೆರ್ಸಿ ಪಡೆದ ಬಳಿಕ ಬಿಸಿಸಿಐ ಜೊತೆ ತಮ್ಮ ಅನುಭವ ಹಂಚಿಕೊಂಡ ವೈಭವ್,ಈ ಅದ್ಭುತ ಅನುಭೂತಿಯನ್ನು ವರ್ಣಿಸಲು ನನಗೆ ಮಾತುಗಳೇ ಸಿಗುತ್ತಿಲ್ಲ. ನಾನು ಯಾವ ಕನಸಿಗಾಗಿ ಮೊದಲ ದಿನ ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಿದ್ದೆನೋ, ಆ ಕನಸು ಇಂದು ನನಸಾಗಿದೆ. ನನ್ನ ಕ್ರಿಕೆಟ್ ಜೀವನದ ಅತ್ಯಂತ ದೊಡ್ಡ ಹೆಜ್ಜೆ ಇದು. ಇದೆಲ್ಲವೂ ಒಂದು ಸುಂದರ ಕನಸಿನಂತೆ ಭಾಸವಾಗುತ್ತಿದೆ. ಆ ನೀಲಿ ಜೆರ್ಸಿಯನ್ನು ನೋಡಿದಾಗ ನನ್ನ ಮುಖದಲ್ಲಿನ ನಗು ತಡೆಯಲು ಸಾಧ್ಯವಾಗಲಿಲ್ಲ. ಕೆಲವೊಮ್ಮೆ ನಾವು ಊಹಿಸದ ಸಂಗತಿಗಳು ನಿಜವಾದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುವುದಿಲ್ಲ, ಈಗ ನನ್ನ ಸ್ಥಿತಿಯೂ ಹಾಗೆಯೇ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

3ನೇ ನಂಬರ್ ಜೆರ್ಸಿ; ಸಚಿನ್ ದಾಖಲೆ ಬ್ರೇಕ್!

ವೈಭವ್ ಸೂರ್ಯವಂಶಿ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕಾಗಿ ‘ನಂಬರ್ 3’ ಜೆರ್ಸಿಯನ್ನು ಆಯ್ದುಕೊಂಡಿದ್ದಾರೆ. ಕೇವಲ 15 ವರ್ಷ ವಯಸ್ಸಿಗೆ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಕ್ರಿಕೆಟ್ ದೇವರೆನಿಸಿಕೊಂಡ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವೈಭವ್ ಈಗಾಗಲೇ ಮುರಿದಿದ್ದಾರೆ. ಶುಕ್ರವಾರ ಅವರು ಮೈದಾನಕ್ಕಿಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆಯಲಿದ್ದಾರೆ.

ಕೇವಲ 13ನೇ ವಯಸ್ಸಿಗೆ ವೃತ್ತಿಪರ ಕ್ರಿಕೆಟ್ಗೆ ಕಾಲಿಟ್ಟಿದ್ದ ವೈಭವ್, 14ನೇ ವಯಸ್ಸಿಗೆ ದೇಶಿ ಕ್ರಿಕೆಟ್ ಹಾಗೂ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರು. ಇತ್ತೀಚಿನ ಐಪಿಎಲ್ ಸೀಸನ್ನಲ್ಲಿ ವಿಶ್ವದರ್ಜೆಯ ಬೌಲರ್ಗಳನ್ನು ಮನಬಂದಂತೆ ಕಾಡಿದ್ದ ಇವರು, ಎರಡು ಭರ್ಜರಿ ಶತಕಗಳೊಂದಿಗೆ ಒಟ್ಟು 776 ರನ್ ಗಳಿಸಿ ‘ಆರೆಂಜ್ ಕ್ಯಾಪ್’ ಮುಡಿಗೇರಿಸಿಕೊಂಡಿದ್ದರು.

Join WhatsApp

Join Now

Join Telegram

Join Now