ಬಿಹಾರ: ಸೋಷಿಯಲ್ ಮೀಡಿಯಾದಲ್ಲಿ ಕೋತಿಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಅದು ತನ್ನ ಮರಿಗೆ ಗಾಯವಾದ ಪರಿಣಾಮ ತಾಯಿ ಕೋತಿ ಅದೆಷ್ಟು ನೋವು ಅನುಭವಿಸಿದೆ, ಮರಿಯನ್ನು ಕಾಪಾಡಲು ಹೇಗೆ ಓಡೋಡಿ ಬಂದಿದೆ ಎಂಬುದು ಅದರಲ್ಲಿ ಕಾಣುತ್ತಿ
सासाराम में जब एक बंदर अपने बच्चे के साथ खुद का इलाज़ करवाने पहुंचा निजी अस्पताल। इलाज़ करने वाले डॉक्टर एस एम अहमद खुद को सौभाग्यशाली समझ रहे है की हनुमान जी खुद चलकर इनके पास पहुंचे pic.twitter.com/0NPrAtV6NU
— Rajesh Kumar Ojha (@RajeshK_Ojha) June 8, 2022
ಮರದಿಂದ ಕೋತಿ ಮತ್ತು ಅದರ ಮಗು ಕೆಳಗೆ ಬಿದ್ದಿದೆ. ತಾಯಿ ಕೋತಿಗೂ ತಲೆಗೆ ಗಾಯವಾಗಿದೆ, ಮರಿ ಕೋತಿಗೆ ಕಾಲಿನಲ್ಲಿ ಗಾಯವಾಗಿದೆ. ಆದರೆ ತಾಯಿ ತನ್ನ ಗಾಯಕ್ಕಿಂತ ಮರಿ ಕಾಲಿಗೆ ಆದ ಗಾಯದಿಂದ ತಾಯಿ ಕೋತಿ ನೊಂದಿದೆ. ಕೋತಿಗೆ ಇದೇ ಆಸ್ಪತ್ರೆ ಅಂತ ಅದು ಹೇಗೆ ಎನ್ನಿಸಿತೋ ಏನೋ, ಆಸ್ಪತ್ರೆಯ ಮುಂದೆ ಬಂದು ಕೂತಿದೆ.
ಅಲ್ಲಿನ ಸಿಬ್ಬಂದಿ ಆ ಕೋತಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಇದನ್ನು ಗಮನಿಸಿದ ವೈದ್ಯ ಅಹ್ಮದ್ ಕೋತಿಯನ್ನು ಒಳಗೆ ಕರೆದು ಚಿಕಿತ್ಸೆ ನೀಡಿದ್ದಾರೆ. ಆ ಕೋತಿ, ಡಾಕ್ಟರ್ ಹೇಳಿದಂತೆ ಮಾತು ಕೇಳಿದೆ. ಡಾಕ್ಟರ್ ಮುಂದೆ ಕೂತು ಚಿಕಿತ್ಸೆಯನ್ನು ಪಡೆದುಕೊಂಡಿದೆ. ಮರಿ ಕೋತಿಗೂ ಚಿಕಿತ್ಸೆ ಕೊಡಿಸಿದೆ. ಈ ದೃಶ್ಯ ಕಂಡು ಜನರೆಲ್ಲಾ ಓಡೋಡಿ ಬಂದಿದ್ದಾರೆ. ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.