ಡೆಹ್ರಾಡೂನ್: ಸದ್ಯ ಕೇದಾರನಾಥನ ಯಾತ್ರೆ ಆರಂಭವಾಗಿದೆ. ಮೂಲೆ ಮೂಲೆಯಿಂದ ಜನಸಾಗರ ಹರಿದು ಬರುತ್ತದೆ. ಇದಕ್ಕಾಗಿ ಬಸ್, ಫ್ಲೈಟ್ ಸೇರಿದಂತೆ ಹಲವು ವಾಹನಗಳ ಮೂಲಕ ಕೇದಾರನಾಥನ ಸನ್ನಿಧಿಗೆ ಬಂದು ದರ್ಶನ ಪಡೆಯುತ್ತಾರೆ. ಈ ಮಧ್ಯೆ ಕೇದಾರನಾಥದ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಘಟನೆ ನಡೆದಿದೆ.
#WATCH A helicopter belonging to a private aviation company while landing at Kedarnath helipad had an uncontrolled hard landing on 31st May; no passengers were injured in the incident#Uttarakhand pic.twitter.com/4yskr0aoz5
— ANI UP/Uttarakhand (@ANINewsUP) June 6, 2022
ಸದ್ಯ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸಲಾಗಿದೆ. ಖಾಸಗಿ ವಿಮಾನಯಾನ ಸಂಸ್ಥೆಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡಿದ್ದು, ಬಳಿಕ ವಿಮಾನದಲ್ಲಿದ್ದವರು ಹಾಗೂ ಹೊರಗಿದ್ದವರು ಸಿಲುಕಿಕೊಂಡಿದ್ದ ಘಟನೆಯ ವಿಡಿಯೋ ಇದೀಗ ಬಹಿರಂಗವಾಗಿದೆ.
ಹೆಲಿಕಾಪ್ಟರ್ ಲ್ಯಾಂಡಿಂಗ್‌ನ ಈ ವಿಡಿಯೋ ಮೇ 31 ರದ್ದು, ಇದರಲ್ಲಿ ಖಾಸಗಿ ವಿಮಾನಯಾನ ಹೆಲಿಕಾಪ್ಟರ್ ಕೇದಾರನಾಥ ಹೆಲಿಪ್ಯಾಡ್‌ನಲ್ಲಿ ಇಳಿಯುವಾಗ ಹಠಾತ್ ನಿಯಂತ್ರಣವನ್ನು ಕಳೆದುಕೊಂಡಿತು. ಆದರೆ ನಂತರ ಪೈಲಟ್ ಪರಿಸ್ಥಿತಿಯನ್ನು ಹತೋಟಿಗೆ ತಂದರು ಮತ್ತು ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗಿರುವ ವಿಡಿಯೋದಲ್ಲಿ ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ ಹೇಗೆ ನಿಧಾನವಾಗಿ ಕೆಳಗೆ ಬಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಲ್ಯಾಂಡಿಂಗ್ ಮಾಡುವಾಗ, ಪೈಲಟ್ ಹೆಲಿಕಾಪ್ಟರ್‌ನ ನಿಯಂತ್ರಣವನ್ನು ಕಳೆದುಕೊಂಡಿರುವುದು ಕಂಡುಬರುತ್ತದೆ. ವಿಡಿಯೋದಲ್ಲಿ ಗಾಳಿಯಿಂದ ನೆಲಕ್ಕೆ ಚಲಿಸುವಾಗ, ಹೆಲಿಕಾಪ್ಟರ್ ತೂಗಾಡುತ್ತಿರುವುದನ್ನು ಕಾಣಬಹುದು.