Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಟಕಗಳನ್ನು ವೀಕ್ಷಿಸಿ, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ : ಪ್ರಕಾಶ್ ಹೆಳವರ್

---Advertisement---

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಆ.01): ಯೂಟೂಬ್, ಮೊಬೈಲ್, ಸಿನಿಮಾ, ಟಿ.ವಿ.ಧಾರವಾಹಿಗಳ ಅಬ್ಬರದ ನಡುವೆ ನಾಟಕಗಳನ್ನು ನೋಡುವವರ ಸಂಖ್ಯೆ ತುಂಬಾ ಕಡಿಮೆ. ಹಾಗಾಗಿ ರಂಗ ಕಲಾವಿದರ ಬದುಕು ಕಷ್ಟದಲ್ಲಿದೆ ಎಂದು ಬೆಂಗಳೂರು ಜಿಲ್ಲಾ ನ್ಯಾಯಾಧೀಶರಾದ ಪ್ರಕಾಶ್ ಹೆಳವರ್ ವಿಷಾಧಿಸಿದರು.

ಬಹುಮುಖಿ ಕಲಾ ಕೇಂದ್ರ, ಕಾರಂಜಿ ಕಲ್ಚರಲ್ ಟ್ರಸ್ಟ್ ಮದಕರಿಪುರ, ಥಿಯೇಟರ್ ಫೋರ್ಟ್ ಚಿತ್ರದುರ್ಗ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ರಂಗ ಪಯಣ ತಂಡದ ಬೆಂಗಳೂರಿನ ಶ್ರವಣಪ್ರಭ ಏಕ ವ್ಯಕ್ತಿ ಪ್ರದರ್ಶನ 55 ನಿಮಿಷದ ನಾಟಕದೊಳ್ ಕರ್ನಾಟಕ ನಾಟಕವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಲೆ, ಕಲಾವಿದರು ಉಳಿಯಬೇಕಾಗಿರುವುದರಿಂದ ಪ್ರತಿಯೊಬ್ಬರು ನಾಟಕವನ್ನು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಹಿರಿಯ ರಂಗ ನಟ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ ಮಾತನಾಡಿ ರಾಜ್ಯದ 31 ಜಿಲ್ಲೆಗಳಲ್ಲಿ 31 ಕಲಾವಿದರು ಏಕಕಾಲಕ್ಕೆ ನಾಟಕ ಪ್ರದರ್ಶನಗೊಳಿಸುತ್ತಿರುವುದು ಸುಲಭವಲ್ಲ. 55 ನಿಮಿಷಗಳ ಈ ನಾಟಕದಲ್ಲಿ ಏಕವ್ಯಕ್ತಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಒಂದು ಸಾಧನೆ ಎಂದು ಗುಣಗಾನ ಮಾಡಿದರು.

ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್ ಮಾತನಾಡುತ್ತ ರಂಗಭೂಮಿ ರಂಗಕಲಾವಿದರಿಗೆ ಪ್ರೋತ್ಸಾಹವಿಲ್ಲದಂತಾಗಿದೆ. ರಂಗಭೂಮಿ ಉಳಿಯಬೇಕಾದರೆ ಎಲ್ಲರೂ ಇಂತಹ ನಾಟಕಗಳನ್ನು ತಪ್ಪದೆ ವೀಕ್ಷಿಸಬೇಕೆಂದು ವಿನಂತಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಮಾತನಾಡಿ ಅಂಗೈಯಲ್ಲೇ ಮನೋರಂಜನೆ ಸಿಗುತ್ತಿರುವುದರಿಂದ ನಾಟಕ ವೀಕ್ಷಣೆಗೆ ಬರುವವರು ತುಂಬಾ ವಿರಳ. ಮೊಬೈಲ್, ಟಿ.ವಿ. ಸಾಮಾಜಿಕ ಜಾಲತಾಣಗಳ ಹಾವಳಿ ನಡುವೆ ರಂಗಭೂಮಿ ಇನ್ನು ಜೀವಂತವಾಗಿದೆ. ಸರ್ಕಾರದಿಂದ ಧನ ಸಹಾಯವಿದೆ. ರಂಗಕಲಾವಿದರು ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದರು.

ಹಿರಿಯ ರಂಗ ನಟ ಹಾಗೂ ರಚನಾ ಕಲಾ ಸಂಘದ ಅಧ್ಯಕ್ಷ ಎಂ.ಸಿ.ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಪ್ರೇಕ್ಷಕರು ರಂಗ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ. ಆಗ ಮಾತ್ರ  ರಂಗಭೂಮಿ ಉಳಿಯಲು ಸಾಧ್ಯ ಎಂದು ಹೇಳಿದರು.

ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ರಂಗಭೂಮಿ ಎಲ್ಲಾ ಕಲೆಗಳಿಗೂ ತಾಯಿ ಬೇರು ಇದ್ದಂತೆ. ಕನ್ನಡ ಚಿತ್ರರಂಗದಲ್ಲಿ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಹಚ್ಚಳಿಯದೆ ಉಳಿದಿರುವ ಡಾ.ರಾಜ್‍ಕುಮಾರ್ ರಂಗಭೂಮಿಯಿಂದಲೆ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರು.

ಅಂತಹ ಶಕ್ತಿ ರಂಗಭೂಮಿಯಲ್ಲಿದೆ ಎಂದರು.
ಎಸ್.ಆರ್.ಎಸ್.ಕಾಲೇಜು ಕನ್ನಡ ಉಪನ್ಯಾಸಕ ಆರ್.ಗುರುರಾಜ್, ಬಹುಮುಖಿ ಕಲಾ ಕೇಂದ್ರದ ಕಾರ್ಯದರ್ಶಿ ಟಿ.ಮಧು, ರಂಗಕರ್ಮಿ ಹನುಮಂತಪ್ಪ ಪೂಜಾರ್ ವೇದಿಕೆಯಲ್ಲಿದ್ದರು. ಹನುಮಂತ, ಚನ್ನಬಸಪ್ಪ, ಓ.ಮೂರ್ತಿ ಇವರುಗಳು ರಂಗಗೀತೆ ಹಾಡಿದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...