ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ) : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬುಧವಾರ ನಡೆದ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಭಾಷಣವನ್ನು ಸ್ವಲ್ಪ ಸಮಯ ನಿಲ್ಲಿಸಿ ಜನರಿಂದ ಬಾರೀ ಚಪ್ಪಾಳೆ ಗಿಟ್ಟಿಸಿಕೊಂಡ ಘಟನೆ ನಡೆದಿದೆ.
Halting the Speech Midway by Hnbl Home Minister due to #Azaan is Great Gesture and has Won the Hearts of Kashmiris, this Clearly Indicates the Respect for the Religion and Sentiments of Kashmiris. @AmitShah @AshokKoul59 #NayaKashmir pic.twitter.com/853g8IXXgq
— Sheikh Mohmmad Iqbal (@ListenIqbal) October 5, 2022
ಉತ್ತರ ಕಾಶ್ಮೀರ ಜಿಲ್ಲೆಯ ಶೋಕತ್ ಅಲಿ ಸ್ಟೇಡಿಯಂನಲ್ಲಿ
ರ್ಯಾಲಿ ನಡೆಯುತ್ತಿದ್ದ ವೇಳೆ ಸಮೀಪದ ಮಸೀದಿಯಲ್ಲಿ ‘ಆಜಾನ್’ ಅಥವಾ ಮುಸ್ಲಿಮರ ಪ್ರಾರ್ಥನೆ ನಡೆಯುತ್ತಿತ್ತು.
ಆಜಾನ್’ ನಡೆಯುತ್ತಿದೆ ಎಂದು ವೇದಿಕೆಯಲ್ಲಿದ್ದವರೊಬ್ಬರು ಹೇಳಿದಾಗ, ಅಮಿತ್ ಶಾ ಅವರು ತಮ್ಮ ಅರ್ಧ ಗಂಟೆಯ ಭಾಷಣವನ್ನು ತಕ್ಷಣವೇ ನಿಲ್ಲಿಸಿದರು. ಇದರಿಂದಾಗಿ ರ್ಯಾಲಿಯಲ್ಲಿ ನೆರೆದಿದ್ದ ಕಾರ್ಯಕರ್ತರು ಭಾರಿ ಚಪ್ಪಾಳೆ ಮತ್ತು ಅವರ ಪರವಾಗಿ ಘೋಷಣೆಗಳನ್ನು ಕೂಗಿದರು.
ನಾನು ನನ್ನ ಭಾಷಣವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂದು ಕೇಳಿ ನಂತರ ಅವರು ತಮ್ಮ ಭಾಷಣವನ್ನು ಮುಂದುವರೆಸಿದರು.
ವೇದಿಕೆಯಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪ್ರಧಾನಮಂತ್ರಿ ಕಚೇರಿಯ (ಪಿಎಂಒ) ರಾಜ್ಯ ಸಚಿವ ಜಿತೇಂದರ್ ಸಿಂಗ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿಲ್ಲ.