ಮೈಸೂರು: ಈ ಹಿಂದೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾಗ ಡಿಕೆ ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಜೋಡೆತ್ತುಗಳೆಂದೇ ಕರೆಯುತ್ತಿದ್ದರು. ಆದರೆ ಈಗ ಲೋಕಸಭಾ ಚುನಾವಣೆಯಿಂದ ಜೆಡಿಎಸ್, ಬಿಜೆಪಿ ಜೊತೆಗೆ ಕೈಜೋಡಿಸಿದೆ. ಅದು ಬೇರೆ ಮೋದಿ ಸಂಪುಟದಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಈಗ ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ಕೊಡುವ ತನಕ ಬಿಡಲ್ಲ ಎಂದು ಮೈಸೂರು ಚಲೋ ನಡೆಸಿದ್ದಾರೆ. ಇದರ ನಡುವೆ ಮೈಸೂರಿನಲ್ಲಿ ಕುಮಾರಸ್ವಾಮಿ ಡಿಕೆಶಿ ವಿರುದ್ಧ ಮಾತನಾಡಿದರೆ ಇತ್ತ ರಾಮನಗರದಲ್ಲಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
‘ನನ್ನ ಅಣ್ಣನ ಮಗನನ್ನು ನಾನು ಜೈಲಿಗೆ ಕಳುಹಿಸಿದ್ದೀರಿ ಅಂದಿದ್ದೀರಿ ಶಿವಕುಮಾರ್. ಮಿಸ್ಟರ್ ಶಿವಕುಮಾರ್ ನಾನು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿಂತು ಮಾತನಾಡುತ್ತಿದ್ದೀನಿ. ಕಾಫಿ ಡೇ ಸಿದ್ಧಾರ್ಥ್ ಸಾವಿಗೆ ಕಾರಣ ಯಾರು ಅಂತ ಹೇಳುತ್ತೀರಾ..? ಜೇಡ್ರಳ್ಳಿ ಅಂತ ಬೆಂಗಳೂರಲ್ಲಿ ಇದೆ. ವಾಸು ಅಂತ ಇವರ ಸ್ನೇಹಿತರು, ಮ್ಯಾನ್ ಹೋಲ್ ಚೇಂಬರ್ ಗಳನ್ನು ಕದ್ದು ಮಾರಾಟ ಮಾಡ್ತಿದ್ದ ಶಿವಕುಮಾರ್ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಮಾತಿಗೆ ಎದುರೇಟು ನೀಡಿರುವ ಡಿಕೆ ಶಿವಕುಮಾರ್, ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡು ಬಂದು ನಿಲ್ಲಿಸಿ ಬಿಟ್ಟರೆ ಸಾಕು. ಬಡವರಿಗೆ ತೊಂದರೆ ಕೊಟ್ಟಿರೋದು ನನ್ನ ಜಾಯಮಾನದಲ್ಲಿಯೇ ಇಲ್ಲ. ಪಾಪ ಮೆಂಟಲ್ ಆಗಿದ್ದಾನೆ ಅಂತ ಅನ್ನಿಸುತ್ತೆ. ಕುಮಾರಸ್ವಾಮಿಯನ್ನು ಹುಚ್ಚಾಸ್ಪತ್ರೆಗೆ ಸೇರಿಸೋಣಾ. ನನ್ನ ಎಸ್.ಎಂ.ಕೃಷ್ಣ ಸಂಬಂಧ ಏನು ಅಂತ ಅವರಿಗೇನು ಗೊತ್ತಿದೆ. ಹಿತೈಶಿಗಳಿಗೋ, ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸೋಣಾ ಎಂದು ಹೇಳೋಣಾ ಎಂದು ಸಿದ್ದಾರ್ಥ್ ಅವರ ಸಾವಿನ ಬಗ್ಗೆ ಕುಮಾರಸ್ಯೆತ್ತಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.